ಬೆಂಗಳೂರು, ಏ.19. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಸೇರಿದಂತೆ ಯಾವುದೇ ನಗರ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರಿಗೆ ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆಗೆ ನಡೆಸುವ ಸಭೆಗಳಲ್ಲಿ ಮತದಾನದ ಹಕ್ಕಿಲ್ಲ ಎಂದು ಹೈಕೋರ್ಟ್ ಆದೇಶಿದೆ.
ಮಾಲೂರು ಪುರಸಭೆಯ ಕೆ.ಲಕ್ಷ್ಮೀಕಾಂತ ಸೇರಿ ಆರು ನಾಮ ನಿರ್ದೇಶಿತ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾ.
ಅಲೋಕ್ ಅರಾಧೆ ಮತ್ತು ನ್ಯಾ. ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ದ ಕಲಂ 243ಆರ್(2)(ಎ) ಸಿಂಧುತ್ವನ್ನು ಎತ್ತಿಹಿಡಿದಿರುವ ನ್ಯಾಯಾಲಯ, ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಕೇಳುವ ಮೂಲಭೂತ ಹಕ್ಕಿಲ್ಲ ಎಂದು ಸಾರಿದೆ.
ನ್ಯಾಯಾಲಯ ಕರ್ನಾಟಕ ಮುನಿಸಿಪಾಲಿಟಿ ಕಾಯಿದೆ 1964 ರ ಸೆಕ್ಷನ್ 11(1)(ಬಿ) ಸಾಂವಿ’ನಿಕ ಸಿಂಧುತ್ವವನ್ನೂ ಸಹ ಎತ್ತಿಹಿಡಿದಿದೆ. ಸೆಕ್ಷನ್ 11(ಬಿ) ಅನ್ನು 243ಆರ್(2)(ಎ)ಗೆ ಅನುಗುಣವಾಗಿ ರೂಪಿಸಲಾಗಿದೆ. ಹಾಗಾಗಿ ಅದೂ ಕೂಡ ಸಂವಿಧಾನಬಾಹಿರವಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.