Breaking News

ಚಾಕೊಲೇಟ್ ಕೊಡ್ತೀನೆಂದು ಪುಸಲಾಯಿಸಿ ರೇಪ್ & ಕಿಡ್ನಾಪ್; ಅಪರಾಧಿಗೆ 10 ವರ್ಷ ಜೈಲು

Spread the love

ಬೆಂಗಳೂರು: ಚಾಕೊಲೇಟ್ ಕೊಡಿಸುವ ನೆಪದಲ್ಲಿ ಮಗು ಒಂದನ್ನ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ ಆರೋಪಿಗೆ ಆನೇಕಲ್ ತಾಲೂಕಿನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶ್ರೀಕಾಂತ್ ಅವರು 10 ವರ್ಷ ಜೈಲು ಶಿಕ್ಷೆಯನ್ನ ವಿಧಿಸಿದ್ದಾರೆ. ಲೋಕನಾಥ್ ಬಹದ್ದೂರ್ ಜೈಲು ಶಿಕ್ಷೆಗೆ ಒಳಗಾದ ಅಪರಾಧಿ.

ಏನಿದು ಪ್ರಕರಣ..?
ನೇಪಾಳಿ ಮೂಲದವನಾದ ಲೋಕನಾಥ್ ಬಹದ್ದೂರ್ 2017ರಲ್ಲಿ ಮಗುವನ್ನ ಕಿಡ್ನಾಪ್ ಮಾಡಿ ಅತ್ಯಾಚಾರ ನಡೆಸಿದ್ದ. ಅತ್ತಿಬೆಲೆಯಲ್ಲಿ ವಾಚ್ ಮೆನ್ ಆಗಿ ಕೆಲಸ ಮಾಡ್ತಿದ್ದ ಈತ, ಮನೆ ಎದುರು ಆಟವಾಡ್ತಿದ್ದ ಮಗುವಿಗೆ ಚಾಕೊಲೇಟ್ ಕೊಡಿಸೋದಾಗಿ ಪುಸಲಾಯಿಸಿ ಕರೆದೊಯ್ದಿದ್ದ.

ಚೆನ್ನೈನಲ್ಲಿ ನೇಪಾಳ ಮೂಲದವರಿಗೆ ಮಗುವನ್ನ ಕೊಟ್ಟಿದ್ದ. ನಂತರ ಬೆಂಗಳೂರಿಗೆ ಬಾರದೇ ಚೆನ್ನೈನಲ್ಲಿ ಅಡ್ಡಾಡಿಕೊಂಡಿದ್ದ ಲೋಕನಾಥ್​ನನ್ನ ಅತ್ತಿಬೆಲೆ ಇನ್​ಸ್ಪೆಕ್ಟರ್ ಎಲ್.ವೈ.ರಾಜೇಶ್ & ಟೀಂ ಬಂಧಿಸಿತ್ತು. ಸೈಂಟಿಫಿಕ್ ಎವಿಡೆನ್ಸ್​​ನಲ್ಲಿ ಆರೋಪಿ ಮಗುವಿನ ಮೇಲೆ ಅತ್ಯಾಚಾರ ಎಸಗಿರೋದು ಸಾಬೀತಾಗಿತ್ತು. ಕೃತ್ಯ ನಡೆದು ಐದು ವರ್ಷಗಳ ಸುದೀರ್ಘ ವಿಚಾರಣೆ ನಂತರ ಆರೋಪಿಗೆ 10 ವರ್ಷ ಸಜೆ ಹಾಗೂ ಐದು ಸಾವಿರ ದಂಡವನ್ನ ವಿಧಿಸಲಾಗಿದೆ.


Spread the love

About Laxminews 24x7

Check Also

ರಾಜ್ಯದ ಹಲವೆಡೆ ವರುಣನ ಅಬ್ಬರ – ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ತಂಪೆರೆದ ಆಲಿಕಲ್ಲು ಮಳೆ

Spread the loveಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಕೊಡಗು, ಹಾಸನ ಸೇರಿದಂತೆ ಹಲವೆಡೆ ಕೆಲ ಜಿಲ್ಲೆಗಳಲ್ಲಿ ಮಳೆರಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ