ನಾನು ದಿನೇಶ್ ಕಾರ್ತಿಕ್ ಅವರನ್ನು ಕೊನೆಯ ಬಾರಿಗೆ ನೋಡಿದಾಗ ಯುಕೆಯಲ್ಲಿ ಕಾಮೆಂಟ್ರಿ ಮಾಡುತ್ತಿದ್ದರು. ಆಗ ನಾನು ಅವರು ತಮ್ಮ ವೃತ್ತಿಜೀವನದ ಅಂತ್ಯದಲ್ಲಿದ್ದಾರೆ ಎಂದು ಭಾವಿಸಿದ್ದೆ.IPL 2022: ಇತ್ತೀಚೆಗೆ ಸಂದರ್ಶನವೊಂದರಲ್ಲಿ ದಿನೇಶ್ ಕಾರ್ತಿಕ್ಗೆ ಒಂದು ಜೋಕ್ ಹೇಳುವಂತೆ ಕೇಳಲಾಗಿತ್ತು…ಡಿಕೆ ಹೇಳಿದ ಜೋಕ್- ಎಬಿ ಡಿವಿಲಿಯರ್ಸ್ ಈ ಸಲ RCB ಯಲ್ಲಿ ಆಡ್ತಿಲ್ಲ.
ಇದರಲ್ಲೇನು ತಮಾಷೆಯಿದೆ ಎಂದು ನೀವಂದುಕೊಂಡರೆ, ದಿನೇಶ್ ಕಾರ್ತಿಕ್ ಹಾಗೆ ಹೇಳಲು ಮುಖ್ಯ ಕಾರಣ, ಒಬ್ಬ ಆಟಗಾರ ಅತ್ಯುತ್ತಮವಾಗಿ ಆಡುತ್ತಿದ್ದರೂ ನಿವೃತ್ತಿ ಘೋಷಿಸಿರುವುದಕ್ಕಿಂತ ದೊಡ್ಡ ತಮಾಷೆ ಏನಿದೆ ಎಂಬುದಾಗಿತ್ತು. ಇದೀಗ ಅದೇ ದಿನೇಶ್ ಕಾರ್ತಿಕ್ ಅವರನ್ನು ಹೊಡಿಬಡಿ ದಾಂಡಿಗ ಎಬಿ ಡಿವಿಲಿಯರ್ಸ್ ಹಾಡಿಹೊಗಳಿದ್ದಾರೆ. ಅಷ್ಟೇ ಅಲ್ಲದೆ ನನ್ನನ್ನು ಮೈದಾನಕ್ಕಿಳಿಯುವಂತೆ ಪ್ರೇರೇಪಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ.