ಶಿರಸಿ: ಯುವತಿಯೊಬ್ಬಳು ಫೆಸ್ಬುಕ್ನಲ್ಲಿ ಯುವಕನೋರ್ವನಿಗೆ ವಿಡಿಯೋ ಕಾಲ್ನಲ್ಲಿ ಬಳಕುವ ತನ್ನ ಮೈಮಾಟವನ್ನ ತೋರಿಸಿ ಆತನಿಂದ 90 ಸಾವಿ ಮುಂಡಿಯಿಸಿದ್ದಾಳೆ.

ಈ ಘಟನೆ ಶಿರಸಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ನಡದಿದ್ದು, ನಗರದ ಟಿ.ಎಸ್.
ಎಸ್.ಗೆ ಅಡಿಕೆ ವ್ಯಾಪಾರ ಮಾಡಿದ ಹಣವನ್ನೆಲ್ಲ ಕಳೆದುಕೊಂಡಿದ್ದಾನೆ. ಬೆಂಗಳೂರಿನ ಯುವತಿಯೋರ್ವಳು ಫೇಸ್ಬುಕ್ನಲ್ಲಿ ಶಿರಸಿಯ ಯುವಕನಿಗೆ ಪರಿಚಯವಾಗಿದ್ದಾಳೆ, ನಂತರ ದಿನನಿತ್ಯ ಇಬ್ಬರು ಚಾಟಿಂಗ್ ಮಾಡಿದ್ದಾರೆ. ಈ ಯುವಕನಿಗೆ 35 ವರ್ಷ ವಯಸ್ಸಾಗಿದ್ದು, ಈವರೆಗೂ ಮದುವೆಯಾಗಿಲ್ಲ. ಈ ಹಿನ್ನೆಲೆ ಫೇಸ್ಬುಕ್ನಲ್ಲಿ ಚೆಂದವಾಗಿ ಮಾತನಾಡುತ್ತಿದ್ದ ಯುವತಿಯ ಜೊತೆ ಸಲಿಗೆಯಿಂದಲೇ ಮಾತನಾಡುತ್ತಿದ್ದ. ಆಗಾಗ ಇಬ್ಬರ ಫೋಟೋಗಳು ಶೇರ್ ಆಗುತ್ತಾ ಇದ್ದವು. ಕಳೆದ ಗುರುವಾರ ಇಬ್ಬರು ಸೇರಿ ವಿಡಿಯೋ ಕಾಲ್ ಮಾಡಿ ಅಶ್ಲೀಲ ರೀತಿಯಲ್ಲಿ ವ್ಯವಹರಿಸಿದ್ದಾರೆ. ಆದರೇ ಆ ಹುಡುಇ ಆತನ ವಿಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದು, ಮಾರನೇ ದಿನ ಹುಡುಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ..

ನನಗೆ ತುರ್ತಾಗಿ 10 ಸಾವಿರ ಬೇಕು ಎಂದು ಕೇಳಿದಕ್ಕೆ ಯುವಕ ಅಡಿಕೆ ಮಾರಿದ್ದ ಹಣದಲ್ಲಿ ಯುವತಿಗೆ ಗೂಗಲ್ ಪೇ ಮೂಲಕ ಹಣ ರವಾನಿಸಿದ್ದಾನೆ. ಇದನ್ನೇ ರೂಢಿ ಮಾಡಿಕೊಂಡ ಯುವತಿ ಪದೇ ಪದೇ ಯುವಕನ ಬಳಿ ಹಣಕ್ಕೆ ಬೇಡಿಕೆ ಇಡುತ್ತಾ ಬಂದಿದ್ದಾಳೆ. ಇದಕ್ಕೆ ಬೇಸತ್ತ ಯುವಕ ನಂನಿಂದ ಇನ್ನೂ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಯುವಕ ಯುವತಿಯ ಜೊತೆ ಅಶ್ಲೀಲ ರೀತಿಯಲ್ಲಿ ವರ್ತಿಸಿದ್ದ ವಿಡಿಯೋ ರೆಕಾರ್ಡ್ರನ್ನು ಯುವಕನಿಗೆ ಕಳಿಸಿ ನೀನು ಹಣ ನೀಡದಿದ್ದರೇ ಇದನ್ನ ವೈರಲ್ ಮಾಡುತ್ತೇನೆ ಎಂದು ಧಮಕಿ ಹಾಕಿದ್‌ಉ , ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೆದರಿಸಿದ್ದಾಳೆ. ಇದಕ್ಕೆ ಹೆದರಿದ ಯುವಕ ಯುವಕ ಬರೋಬ್ಬರಿ 90 ಸಾವಿರ ಹಾಕಿ ಕೈ ತೊಳೆದುಕೊಂಡಿದ್ದಾನೆ
Laxmi News 24×7