Breaking News

ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಮಕ್ಕಳ ಸಾಹಿತಿ ಶರಣಪ್ಪ ಕಂಚ್ಯಾಣಿ ನಿಧನ

Spread the love

ವಿಜಯಪುರ: ಮಕ್ಕಳ ಸಾಹಿತಿ ಶರಣಪ್ಪ ಕಂಚ್ಯಾಣಿ (82) ಬುಧವಾರ ಬೆಳಿಗ್ಗೆ ನಿಧನರಾದರು.ಮುದ್ದೇಬಿಹಾಳ ತಾಲ್ಲೂಕಿನ ಸರೂರ ಗ್ರಾಮದವರಾಗಿದ್ದ ಕಂಚ್ಯಾಣಿ ಶರಣಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವಿವಿಧೆಡೆ ಸೇವೆ ಸಲ್ಲಿಸಿ ವಿಜಯಪುರದಲ್ಲಿ ನೆಲೆಸಿದ್ದರು.

 

ವಿಜಯಪುರದ ರಾಜೇಂದ್ರನಗರ ಎನ್.ಸಿ. ಸಿ. ಆಫೀಸ್ ಬಳಿ ಇರುವ ಅವರ ಕಿರಿಯ ಪುತ್ರ ಮಹಂತೇಶ ಕಂಚ್ಯಾಣಿಯವರ ಮನೆಯಲ್ಲಿ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿದೆ.

ಮಧ್ಯಾಹ್ನ 3 ಗಂಟೆಗೆ ಬಿ.ಎಲ್.ಡಿ. ಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕವಿ ಶರಣಪ್ಪ ಕಂಚ್ಯಾಣಿ ಅವರ ಇಚ್ಛೆಯಂತೆ ಕುಟುಂಬಸ್ಥರು ದೇಹದಾನ ಮಾಡಲಿದ್ದಾರೆ.

ನಿವೃತ್ತ ಪ್ರಾಚಾರ್ಯ ಅರವಿಂದ ಕಂಚ್ಯಾಣಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಸೇರಿದಂತೆ ಐವರು ಪುತ್ರರು, ಪುತ್ರಿಯರು ಇದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ