Breaking News

ಸಚಿವ ಈಶ್ವರಪ್ಪ ವಿರುದ್ಧ ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಸ್ಪೋಟಕ ಮಾಹಿತಿ

Spread the love

ಸಚಿವ ಈಶ್ವರಪ್ಪ ಪತ್ರಿಕಾಗೋಷ್ಠಿ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮನೋನ್ನೊಳ್ ಕರ್, ನಾನು ಮತ್ತು ಸಂತೋಷ್ ಬೈಲಹೊಂಗಲದ ಸ್ವಾಮೀಜಿ ಅವರ ಜೊತೆ ಈಶ್ವರಪ್ಪ ಅವರನ್ನು ಎರಡು ಬಾರಿ ಭೇಟಿಯಾಗಿದ್ದೆವು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

 

100 ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆಯ ಜಾತ್ರೆಗೆ 108 ಕಾಮಗಾರಿಗಳನ್ನು ನಡೆಸುವುದಾಗಿ ಪಟ್ಟಿ ತಯಾರಿಸಿಕೊಂಡು ಹೋಗಿದ್ದವು. ಕಾಮಗಾರಿಗಳನ್ನು ಚೆನ್ನಾಗಿ ನಡೆಸಿ ಎಂದು ಈಶ್ವರಪ್ಪನವರು ಸೂಚನೆ ನೀಡಿದ್ದರು ಎಂದು ತಿಳಿಸಿದ್ದಾರೆ.

ಈಶ್ವರಪ್ಪನವರ ಸೂಚನೆ ಮೇರೆಗೆ 4 ಕೋಟಿ ವೆಚ್ಚದಲ್ಲಿ 108 ಕಾಮಗಾರಿಗಳನ್ನು ನಡೆಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಇಂದು ಶಿವಮೊಗ್ಗದಲ್ಲಿ ನಡೆಸಿದ ಪತ್ರಿಕಾಗೋಷ್ಟಿ ವೇಳೆ ಸಚಿವ ಈಶ್ವರಪ್ಪ, ತಮಗೆ ಸಂತೋಷ್‌ ಪಾಟೀಲ್‌ ಯಾರೆಂದೇ ಗೊತ್ತಿಲ್ಲ. ಆತನ ಮುಖವನ್ನೂ ನಾನು ನೋಡಿಲ್ಲ ಎಂದು ಹೇಳಿದ್ದರು.


Spread the love

About Laxminews 24x7

Check Also

ಜನ್ಮದಿನ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಚನ್ನರಾಜ, ಮೃಣಾಲ್

Spread the loveಬೆಳಗಾವಿ : ಶನಿವಾರ ಬೆನಕನಹಳ್ಳಿಯ ಗಾರ್ಡನ್ ಕೋರ್ಟ್ ಮುಂಬಾಗದಲ್ಲಿ ಹಿರಿಯ ನಾಗರಿಕರೊಂದಿಗೆ ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ