ನವದೆಹಲಿ: ಈಗಾಗಲೇ ಅಗತ್ಯವಸ್ತುಗಳ ಬೆಲೆ, ತೈಲಬೆಲೆಯಿಂದ ತತ್ತರಿಸಿರೋ ದೇಶದ ಜನತೆಗೆ ಶೀಘ್ರವೇ ಗೃಹ ಸಾಲ ಬಡ್ಡಿ ದರ ಏರಿಕೆಯ ಶಾಕ್ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಬ್ಯಾಂಕ್ ಠೇವಣಿಗಳ ದರ ಏರಿಕೆಯಾಗುವ ರೀತಿಯಲ್ಲೇ ಗೃಹ ಸಾಲದ ಬಡ್ಡಿದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಗೃಹ ಸಾಲವನ್ನು ಆರಂಭಿಕ ಹಂತದಲ್ಲಿ 5 ಮೂಲಾಂಶಗಳಷ್ಟು ಹೆಚ್ಚಳ ಮಾಡೋ ನಿರೀಕ್ಷೆಯಿದೆ ಎಂಬುದಾಗಿ ಬ್ಯಾಂಕ್ ನ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಅಂದಹಾಗೇ ಗೃಹ ಸಾಲ ಸಾಮಾನ್ಯವಾಗಿ ರೆಪೋ ದರವನ್ನು ಅವಲಂಬಿಸಿರುತ್ತದೆ. ಸದ್ಯಕ್ಕೆ ಆರ್ ಬಿ ಐ ರೆಪೋದರ ಏರಿಕೆ ಮಾಡಿಲ್ಲ. ಜೂನ್ ವೇಳೆಗೆ ಬದಲಾವಣೆ ಆಗೋ ಸಾದ್ಯತೆ ಇದ್ದು, ಆಗ ಗೃಹ ಸಾಲದ ಬಡ್ಡಿದರ ಕೂಡ ಏರಿಕೆ ಆಗೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Laxmi News 24×7