ಫತೇಹಾಬಾದ್(ಹರಿಯಾಣ): ಪರೀಕ್ಷೆ ಬಂದ್ರೆ ಸಾಕು ಕೆಲವು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಇದ್ದರೆ, ಇನ್ನೂ ಕೆಲವರು ಹೆದರುವುದುಂಟು.
ಹಾಗೆ ಮತ್ತೆ ಕೆಲವರು ಪರಿಕ್ಷಾ ಕೊಠಡಿಯಲ್ಲಿ ನಕಲು ಮಾಡುವುದು ಹೇಗೆ ಎಂಬ ಆಲೋಚನೆಗೆ ಬೀಳುವುದೂ ಉಂಟು. ಈ ನಕಲು ವಿಚಾರಕ್ಕೆ ಬಂದರೆ ಮೈಕ್ರೋ ಝೆರಾಕ್ಸ್ ಅಥವಾ ಏರ್ ಫೋನ್ ಬಳಕೆ ಮಾಡಿರುವುದನ್ನು ನಾವು ಇದುವರೆಗೆ ನೋಡಿದ್ದೇವೆ. ಆದರೆ ಇಲ್ಲೋರ್ವ ವಿದ್ಯಾರ್ಥಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ.
ಹೌದು, ಅಷ್ಟಕ್ಕೂ ಆ ವಿದ್ಯಾರ್ಥಿ ಮಾಡಿದ್ದ ಖತರ್ನಾಕ್ ಐಡಿಯಾ ಏನು ಎಂಬುದನ್ನು ತಿಳಿದುಕೊಳ್ಳೋಣ.. ಹರಿಯಾಣದಲ್ಲಿ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆಗಳಲ್ಲಿ ನಕಲು ಮಾಡುವವರ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿರಿಸಿ ಪತ್ತೆ ಮಾಡುತ್ತಿದ್ದಾರೆ. ಫತೇಹಾಬಾದ್ ಜಿಲ್ಲೆಯಲ್ಲಿ ಇಂತಹ ಕೆಲವು ಚಾಲಾಕಿಗಳು ಸಿಕ್ಕಿಬಿದ್ದಿದ್ದಾರೆ.ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಗ್ಯಾಲರಿಯಲ್ಲಿ ಇಂಗ್ಲಿಷ್ ವಿಷಯದ ಉತ್ತರಗಳು ಪತ್ತೆಯಾಗಿವೆ. ಹಾಗೆ ಅದೇ ಕೇಂದ್ರದಲ್ಲಿ ಓರ್ವ ಬಾಲಕಿ ಬಳಿ ನಕಲು ಚೀಟಿಗಳು ಪತ್ತೆಯಾವೆ. ಚೀಟಿಯನ್ನು ಆ ಬಾಲಕಿ ತನ್ನ ಶರ್ಟ್ ನಲ್ಲಿ ಬಚ್ಚಿಟ್ಟಿದ್ದಳು ಎನ್ನಲಾಗ್ತಿದೆ.