Breaking News

ದುಬೈನಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪನೆ, ಮಧ್ಯಪ್ರಾಚ್ಯ ರಾಷ್ಟ್ರಗಳಿಗೂ ಹರಡಿದ ವಿಶ್ವಗುರು ಚಿಂತನೆಗಳು

Spread the love

ಬೆಂಗಳೂರು,ಜು.5- ಇಂಗ್ಲೆಂಡ್ ನಲ್ಲಿರುವ ಲಂಡನ್ ನ ಥೇಮ್ಸ್ ನದಿ ದಂಡೆ ಮೇಲೆ ವಿಶ್ವ ಗುರು ಬಸವಣ್ಣನವರ ಪ್ರತಿಮೆ ಸ್ಥಾಪನೆಯಾಗಿದ್ದು ಇತಿಹಾಸ. ಈಗ ಅರಬ್ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ಬಸವಣ್ಣನರ ಪ್ರತಿಮೆ ಸ್ಥಾಪನೆಯಾಗುವ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳಿಗೂ ಬಸವಣ್ಣನವರ ಚಿಂತನೆಗಳು ಹರಡುವಂತಾಗಿದೆ.

ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ದುಬೈ ಬಸವ ಸಮಿತಿ ವತಿಯಿಂದ ಬಸವಣ್ಣನವರ ಪಂಚಲೋಹದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.

ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ?ಅವರ ಸಹಾಯ ಮತ್ತು ಸಹಕಾರದಿಂದ ದುಬೈ ಬಸವ ಸಮಿತಿಯವರು ?ಸವಣ್ಣನ ಮೂರ್ತಿಯನ್ನು ಬೆಂಗಳೂರಿನ ಗಾಯತ್ರಿ ಶಿಲ್ಪಿ ಅವರಿಂದ ಕೆತ್ತನೆ ಮಾಡಿಸಿ ದುಬೈಗೆ ತೆಗೆದುಕೊಂಡು ಹೋಗಿದ್ದಾರೆ.

 

ಈ ಮೂರ್ತಿಯನ್ನು ಬಸವ ಜಯಂತಿ ಸಂದರ್ಭದಲ್ಲಿ ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಪ್ರತಿಷ್ಠಾಪಿಸುವ ಯೋಜನೆ ಹಾಕಿಕೊಂಡಿದ್ದರು. ಆದರೆ, ಕೊರೊನಾ ಲಾಕ್ ಡೌನ್ ಪರಿಣಾಮ ?ಸವ ಜಯಂತಿ ಕಾರ್ಯಕ್ರಮ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶನಿವಾರ ಸರಳವಾಗಿ ಬಸವಣ್ಣನ ಪ್ರತಿಷ್ಠಾಪನೆ ಮಾಡುವ ಕಾರ್ಯಕ್ರಮ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ರಾಯಭಾರಿ ಕಚೇರಿಯ ಅ?ಕಾರಿ ವಿಪುಲ? ಶಾ, ಸದ್ಯದ ಕಾವಿಡ್ ಪರಿಸ್ಥಿತಿಯಲ್ಲಿ ಈ ಕಾರ್ಯಕ್ರಮವನ್ನು ಅತ್ಯಂತ ಸರಳ ರೀತಿಯಲ್ಲಿ ಮಾಡಲಾಗಿದೆ.

ಮುಂಬರುವ ದಿನಗಳಲ್ಲಿ ಕನ್ನಡಿಗರೆಲ್ಲರನ್ನೂ ಸೇರಿಸಿ ಅಧಿಕೃತವಾಗಿ ದೊಡ್ಡ ಪ್ರಮಾಣದ ಕಾರ್ಯಕ್ರಮವನ್ನು ನೆರವೇರಿಸಿ ಜಗಜ್ಯೋತಿ ?ಸವೇಶ್ವರರ ಪುತ್ಥಳಿಯನ್ನು ಅನಾವರಣಗೊಳಿಸೋಣ ಎಂದು ಹೇಳಿದರು.
ಕರ್ನಾಟಕದ ಮಹಾ ಸಮಾಜ ಸುಧಾರಕರಾದ ?ಸವಣ್ಣನವರ ವಚನಗಳಿಂದ ನಾವೆಲ್ಲರೂ ಪ್ರೇರೇಪಿತರಾಗಬೇಕೆಂದು ಹೇಳಿ ?ಸವ ಸಮಿತಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಯುಎಇ ?ಸವ ಸಮಿತಿ ದುಬೈ ಅಧ್ಯಕ್ಷರಾದ ಸತೀಶ್ ಹಿಂಡೇರ, ಸಲಹಾ ಹಾಗೂ ಸ್ಥಾಪಕ ಸಮಿತಿಯ ಸದಸ್ಯರಾದ ಚಂದ್ರಶೇಖರ ಲಿಂಗದಳ್ಳಿ, ಬಸವ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಮುಳ್ಳೂರ, ಡಾ.ಮಮತಾ ರೆಡ್ಡೇರ ಹಾಜರಿದ್ದರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣದ ಮಾಸ್ಟರ್​​ ಮೈಂಡ್ ದಕ್ಷಿಣಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ

Spread the love ಬೆಂಗಳೂರು/ದಕ್ಷಿಣ ಕನ್ನಡ: “ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದಿನ ಮಾಸ್ಟರ್​ ಮೈಂಡ್​​ ತಮಿಳುನಾಡಿನ ತಿರುವಲ್ಲೂರಿನ ಕಾಂಗ್ರೆಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ