Breaking News

ಇಂದೂ ವಾಹನ ಸವಾರರಿಗೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ 15 ದಿನದಲ್ಲಿ 9.20 ರೂ. ಹೆಚ್ಚಳ

Spread the love

ಪೆಟ್ರೋಲ್, ಡೀಸೆಲ್ ಬೆಲೆ ಇಂದು ಕೂಡ ಏರಿಕೆಯಾಗಿದೆ. 15 ದಿನಗಳಲ್ಲಿ 13 ನೇ ಬಾರಿ ಹೆಚ್ಚಳವಾಗಿದ್ದು, ಲೀಟರ್ ಗೆ 9.20 ರೂ.ನಷ್ಟು ಏರಿಕೆ ಕಂಡಿದೆ.

ದೆಹಲಿಯಲ್ಲಿ ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್‌ಗೆ 80 ಪೈಸೆಗಳಷ್ಟು ಏರಿಕೆಯಾಗಿದ್ದು, ಕಳೆದ ಎರಡು ವಾರಗಳಲ್ಲಿ ಲೀಟರ್‌ ಗೆ 9.20 ರೂ. ಹೆಚ್ಚಳವಾಗಿದೆ.

 

ದೆಹಲಿಯಲ್ಲಿ ಪೆಟ್ರೋಲ್ ದರ ಈ ಹಿಂದೆ 103.81 ರೂ.ನಿಂದ 104.61 ರೂ., ಹಾಗೂ ಡೀಸೆಲ್ ದರ.95.07 ರೂ.ನಿಂದ 95.87 ರೂ. ಆಗಿದೆ.

ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 84 ಪೈಸೆ ಮತ್ತು 85 ಪೈಸೆ ಏರಿಕೆಯಾಗಿದೆ. ದರ ಹೆಚ್ಚಳದೊಂದಿಗೆ, ಮುಂಬೈನಲ್ಲಿ ಪೆಟ್ರೋಲ್ ಬೆಲೆ ಈಗ 119.67 ರೂಪಾಯಿ ಆಗಿದ್ದರೆ, ಡೀಸೆಲ್ 103.92 ರೂಪಾಯಿಗೆ ಮಾರಾಟವಾಗಲಿದೆ.

ದೇಶಾದ್ಯಂತ ದರಗಳು ಏರಿಕೆಯಾಗಿದ್ದು, ಸ್ಥಳೀಯ ತೆರಿಗೆ ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.

ಮಾರ್ಚ್ 22 ರಂದು ದರ ಪರಿಷ್ಕರಣೆಯಲ್ಲಿ ನಾಲ್ಕೂವರೆ ತಿಂಗಳ ಸುದೀರ್ಘ ವಿರಾಮ ಅಂತ್ಯಗೊಂಡ ನಂತರ ಬೆಲೆಯಲ್ಲಿ ಇದು 13 ನೇ ಹೆಚ್ಚಳವಾಗಿದೆ.


Spread the love

About Laxminews 24x7

Check Also

ಬಿಗ್‌ ಡೀಲ್‌ ಸಕ್ಸಸ್‌ – ಭಾರತದ ಮೇಲಿನ 25% ಹೆಚ್ಚುವರಿ ಸುಂಕ ಕಡಿತ ಆದೇಶಕ್ಕೆ ಟ್ರಂಪ್‌ ಸಹಿ

Spread the loveವಾಷಿಂಗ್ಟನ್‌: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಕೊನೆಗೂ ಸಕ್ಸಸ್‌ ಕಂಡಿದೆ. ರಷ್ಯಾ ತೈಲ ಖರೀದಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ