Breaking News

1800 ವರ್ಷ ಇತಿಹಾಸವಿರುವ ನಾಗ ದೇವರಿಗೆ ಕೋಳಿ ಬಲಿಕೊಟ್ಟು ಪೂಜಿಸುತ್ತಾರಂತೆ ಗ್ರಾಮಸ್ಥರು.

Spread the love

ಕೊರಟಗೆರೆ : ತಾಲೂಕಿನ ಹೊಳವನಹಳ್ಳಿ ಹೋಬಳಿಯ ಸುಮಾರು 1800 ವರ್ಷದ ಇತಿಹಾಸವಿರುವ ಶ್ರೀ ನಾಗದೇವರ ವಿಗ್ರಹವಿದ್ದು ಆ ವಿಗ್ರಹವನ್ನು ಆದಿಜಾಂಬವ ಜನಾಂಗದ ಕುಟುಂಬದವರು, ಈ ಒಂದು ವಿಗ್ರಹಕ್ಕೆ ವಸಂತಕಾಲದ ಮೊದಲ ಹಬ್ಬವಾದ ಯುಗಾದಿಯ ನಂತರದ ದಿನದಂದು, ಈ ಜನಾಂಗದವರು ಈ ವಿಗ್ರಹಕ್ಕೆ ಹಿಂದಿನ ಸಂಪ್ರದಾಯದಂತೆ ಕೋಳಿಯನ್ನು ಬಲಿಕೊಟ್ಟು ವಿಗ್ರಹಕ್ಕೆ ಪೂಜೆಯನ್ನು ಮಾಡಿಕೊಂಡು ಬರುತ್ತಿದ್ದಾರೆ.

 

ಕರಿನಾಗ ಎಂದೇ ಜನಪ್ರಿಯವಾಗಿರುವ ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಪ್ಪ ಗೊಂಡನಹಳ್ಳಿ ಯಲ್ಲಿ ನೆಲೆಸಿರುವ ಸ್ವಾಮಿ ದೇವಸ್ಥಾನಕ್ಕೆ ವಸಂತಕಾಲದ ಯುಗಾದಿ ಹಬ್ಬದ ಹಿಂದಿನ ದಿನದಂದು ಆದಿಜಾಂಬವ ಜನಾಂಗದವರಾದ ನೂರಾರು ಭಕ್ತರು ಬರುತ್ತಾರೆ. ಚರ್ಮವ್ಯಾದಿ, ಕಣ್ಣು, ಮೂಗು, ಕಿವಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ದೇವರ ಅನುಗ್ರಹವೇ ಪರಿಹಾರ ಎಂಬ ನಂಬಿಕೆ .ಇದೆ

ನಾಗದೋಷ ನಿವಾರಣೆಗಾಗಿ ಇಲ್ಲಿಗೆ ಬರುವವರೇ ಹೆಚ್ಚಾಗಿದ್ದಾರೆ. ಶತಮಾನಗಳ ಹಿಂದೆ ಹರಪ್ಪ ಗೊಂಡನಹಳ್ಳಿ ಪುಟ್ಟ ಗ್ರಾಮವಿದ್ದು, ಪ್ರತಿ ವರ್ಷ ಯುಗಾದಿ ನಂತರ ದಿನದಂದು ನಡೆಯುವ ಪೂಜೆಯ ದಿನದೊಂದು ಅನ್ನಾಹಾರ ಸೇವಿಸದೆ ಕಾಲ್ನಡಿಗೆ ಮೂಲಕ ಹೋಗಿ ಪೂಜೆ ಸಲ್ಲಿಸುತಿದ್ದರು, ಓಬಳಯ್ಯ ಎಂಬ ವ್ಯಕ್ತಿಗೆ ಸ್ವಪ್ನದಲ್ಲಿ ಸ್ವಾಮಿ ಕಾಣಿಸಿಕೊಂಡು, ದಕ್ಷಿಣ ದಿಕ್ಕಿನಲ್ಲಿ ಒಂದು ಉತ್ತದಲ್ಲಿ ತಾನಿರುವುದಾಗಿ, ತನ್ನನ್ನು ಹುಡುಕಿ ಪ್ರತಿಷ್ಠಾಪನೆ ನಡೆಸಬೇಕು ಎಂದು ತಿಳಿಸಿದ್ದಾರೆ. ಸ್ವಪ್ನ ವೃತ್ತಾಂತವನ್ನು ಗ್ರಾಮಸ್ಥರಿಗೆ ತಿಳಿಸಿದ ಓಬಳಯ್ಯ ತನ್ನ ಸಂಬಂಧಿಕರನ್ನು ಕರೆದುಕೊಂಡು ಹುತ್ತವನ್ನು ಹುಡುಕಾಟ ನಡೆಸಿದ್ದಾರೆ.ಕೆಲವು ಸಮಯದ ನಂತರ ಮನೆಗೆ ಬಂದು ಆಯಾಸದಿಂದ ಕೋಣೆಯಲ್ಲಿ ಮಲಗಿದ ನಂತರ ಅವರಿದ್ದ ಒಂದು ಸ್ಥಳದಿಂದ ಓಂ ಎಂದು ಶಬ್ದವನ್ನು ಕೇಳಿಸಿಕೊಂಡು ಹೊರಗೆ ಬಂದು ನೋಡಿದರೆ ದಕ್ಷಿಣ ದಿಕ್ಕಿನಲ್ಲಿ ಬೇವಿನ ಮರದ ಕೆಳಗಡೆ ಹುತ್ತದಿಂದ ಓಂ ಎಂಬ ಶಬ್ದವನ್ನು ಕೇಳಿ ಹುತ್ತ ಇದ್ದ ಸ್ಥಳವನ್ನು ಅಗೆದು ನೋಡಿದಾಗ ಹೆಡೆ ಸುತ್ತಿಕೊಂಡಿರುವ ನಾಗರ ವಿಗ್ರಹ ಸಿಕ್ಕಿದೆ. ವಿಗ್ರಹ ಸ್ವಪ್ನದಲ್ಲಿ ದೇವರು ನಿರ್ದೇಶನ ನೀಡಿದಂತೆ ತಟದಲ್ಲಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.


Spread the love

About Laxminews 24x7

Check Also

ಭಾನುವಾರ ನೀಟ್ ಪರೀಕ್ಷೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ 65 ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

Spread the love ಬೆಂಗಳೂರು: ವೈದ್ಯಕೀಯ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ವತಿಯಿಂದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್​-ಯುಜಿ) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ