Breaking News

ಮುಸ್ಲಿಂ ಮಾಂಸ ಮಾರಾಟಗಾರನ ಮೇಲೆ ಹಲ್ಲೆ: 5 ಬಜರಂಗದಳ ಕಾರ್ಯಕರ್ತರ ಬಂಧನ,

Spread the love

ಬೆಂಗಳೂರು: ಹಲಾಲ್ ಕಟ್ ಮಾಂಸ ಮಾರಾಟ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿ ಮೇಲೆ ದಾಳಿ ನಡೆಸಿದ ಐದು ಮಂದಿ ಬಜರಂಗದಳ ಕಾರ್ಯಕರ್ತರನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದೆ. ಈ ಮಧ್ಯೆ ಇಂದು ಯುಗಾದಿ ಹೊಸತೊಡಕಿನ ದಿನ ರಾಜ್ಯಾದ್ಯಂತ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರ ಹಲಾಲ್ ಕಟ್ ಮಾಂಸ ನಿಷೇಧಿಸಿ ಅಭಿಯಾನ ತೀವ್ರವಾಗಿದೆ.

 

ರಾಜ್ಯದ ಜನತೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದೆ ಶಾಂತಿಯಿಂದ ಸಂತೋಷವಾಗಿ ಯುಗಾದಿ ಹೊಸತೊಡಕನ್ನು ಆಚರಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಇಂದು ಯುಗಾದಿಯ ಮರುದಿನ ಜನರು ಆಚರಿಸುವ ಹೊಸತೊಡಕಿನ ದಿನ ಮಾಂಸ ಸೇವನೆ ಮಾಡುವವರು ಮಾಂಸ ಬೇಯಿಸಿ ಮಟನ್, ಚಿಕನ್ ಸೇವಿಸುತ್ತಾರೆ.

ಈ ಹೊತ್ತಿನಲ್ಲಿ ಹಿಂದೂಗಳು ಹಲಾಲ್ ಕಟ್ ಮಾಂಸ ಸೇವಿಸಬೇಡಿ, ಜಟ್ಕಾ ಕಟ್ ಸೇವಿಸಿ ಹಲಾಲ್ ಕಟ್ ಮಾಂಸ ಮುಸ್ಲಿಮರು ಅಲ್ಲಾ ದೇವರಿಗೆ ನೈವೇದ್ಯ ನೀಡುವುದಾಗಿದ್ದು ಇದು ಹಿಂದೂ ದೇವತೆಗಳಿಗೆ ಅಗೌರವ ತೋರಿಸಿದಂತೆ ಎಂದು ಬಲಪಂಥೀಯ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.

ಕಳೆದ ಗುರುವಾರ, ಭದ್ರಾವತಿ ಪಟ್ಟಣದಲ್ಲಿ ಎರಡು ಘಟನೆಗಳು ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತು ಇನ್ನೊಂದು ಹಳೇ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಲಕ್ಷ್ಮಿ ಪ್ರಸಾದ್ ಶುಕ್ರವಾರ ತಿಳಿಸಿದರು. ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐವರು ಅಂಗಡಿಗೆ ತೆರಳಿ ಹಲಾಲ್ ಮಾಂಸ ನೀಡುವಂತೆ ಒತ್ತಾಯಿಸಿದ್ದಾರೆ. ನೀಡದಿದ್ದಾಗ ಅಂಗಡಿ ಮುಚ್ಚಲಾಯಿತು.


Spread the love

About Laxminews 24x7

Check Also

ಪ್ರಿಯಕರನ ಜೊತೆ ಸೇರಿ ತಾಯಿಯಿಂದಲೇ ಮಗಳ ಕೊಲೆ: ಕಠಿಣ ಶಿಕ್ಷೆಗೆ ಸಂಬಂಧಿಕರ ಆಗ್ರಹ

Spread the love ಹಾವೇರಿ: ಪ್ರಪಂಚದಲ್ಲಿ ಕೆಟ್ಟ ತಂದೆ ಇರಬಹುದು. ಆದ್ರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಆದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ