ಬೆಂಗಳೂರು: ಈಗಾಗಲೇ ಹಲವರು ರಾಜ್ಯದ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ( JDS Party ) ಗುಡ್ ಬೈ ಹೇಳಿ, ವಿವಿಧ ರಾಷ್ಟ್ರೀಯ ಪಕ್ಷಗಳನ್ನು ಸೇರಿದ್ದಾರೆ. ಈ ಬಳಿಕ, ಈಗ ಜೆಡಿಎಸ್ ನ ಮತ್ತೊಂದು ವಿಕೆಟ್ ಪತನಗೊಂಡಿದೆ. ಜೆಡಿಎಸ್ ತೊರೆದು, ಶೀಘ್ರವೇ ಬಿಜೆಪಿ ( BJP Party ) ಸೇರ್ಪಡೆಯಾಗೋದಾಗಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ( Basavaraj Horatti ) ಘೋಷಣೆ ಮಾಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಷಯ ಖಚಿತ ಪಡಿಸಿದಂತ ಅವರು, ನಾನು ಬಿಜೆಪಿ ಸೇರ್ಪಡೆಯಾಗೋದು ಖಚಿತವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಎಲ್ಲರೂ ಬಿಜೆಪಿ ಸೇರ್ಪಡೆಗೆ ಸಹಮತ ವ್ಯಕ್ತ ಪಡಿಸಿದ್ದಾರೆ ಎಂದರು.ಈಗಾಗಲೇ ಈ ವಿಷಯವನ್ನು ಜೆಡಿಎಸ್ ವರಿಷ್ಠ ಹೆಚ್ ಡಿ ಕುಮಾರಸ್ವಾಮಿಯವರಿಗೂ ತಿಳಿಸಿದ್ದಾನೆ. ಅವರು ಕೂಡ ಜೆಡಿಎಸ್ ಪಕ್ಷ ಬಿಡೋ ಬಗ್ಗೆ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಶೀಘ್ರವೇ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗೋದಾಗಿ ಪ್ರಕಟಿಸಿದರು