ಮುಂಬೈ: ನಟಿ, ರೂಪದರ್ಶಿ ಮಲೈಕಾ ಅರೋರಾ ಶನಿವಾರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶನಿವಾರ ಮಧ್ಯಾಹ್ನ ಪುಣೆಯಲ್ಲಿ ನಡೆದ ಫ್ಯಾಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಕಾರು ಅಪಘಾತವಾಗಿದೆ. ಅಪಘಾತದಲ್ಲಿ ಮಲೈಕಾ ಕಣ್ಣಿಗೆ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.
ಅಪಘಾತದಲ್ಲಿ ಗಾಯಗೊಂಡ ನಟಿಯನ್ನು ಮುಂಬೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ನಟಿಗೆ ಹೆಚ್ಚಿನ ತೊಂದರೆಗಳಾಗಿಲ್ಲ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಲೈಕಾ ಸಹೋದರಿ ಅಮೃತಾ ಅರೋರಾ ತಿಳಿಸಿದ್ದಾರೆ.ಮಲೈಕಾ ಪುಣೆಯಲ್ಲಿ ನಡೆದ ಫ್ಯಾಶನ್ ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಮುಂಬೈ-ಪುಣೆ ಎಕ್ಸ್ಪ್ರೆಸ್ ವೇಯಲ್ಲಿ ಘಟನೆ ಸಂಭವಿಸಿದೆ. ಕಾರು ಚಲಿಸುತ್ತಿದ್ದ ಸಂದರ್ಭ ಎರಡು ಕಾರುಗಳ ನಡುವೆ ಸಿಲುಕಿ ಅಪಘಾತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
Laxmi News 24×7