Breaking News

ಜಮೀನಿಗಾಗಿ ಸಹೋದರರ ಸವಾಲ್ – ಎರಡು ಗುಂಪುಗಳ ನಡುವೆ ಮಾರಾಮಾರಿ

Spread the love

ಚಿತ್ರದುರ್ಗ: ಜಮೀನು ವಿಚಾರಕ್ಕೆ ಎರಡು ಗುಂಪಿನ ಮಧ್ಯೆ ಮಾರಾಮಾರಿಯಾಗಿದ್ದು, ಪೊಲೀಸರ ಎದುರಲ್ಲಿಯೇ ಅಟ್ಟಾಡಿಸಿಕೊಂಡು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ದುಗ್ಗಾಣಿಹಟ್ಟಿ ಗ್ರಾಮದಲ್ಲಿ ನಡೆದಿದೆ. ಒಂದೇ ಕುಟುಂಬದಲ್ಲಿ ಹುಟ್ಟಿ ಸೋದರ ಸಂಬಂಧಿಗಳಾಗಿರುವ ಚಿತ್ತಣ್ಣ ಹಾಗೂ ಕುಂಟಪ್ಪನ ನಡುವೆ ಜಮೀನಿನ ವಿವಾದ ಸೃಷ್ಟಿಯಾಗಿತ್ತು. ಹೀಗಾಗಿ ಸರ್ವೆ ಮಾಡಿಸಿ, ಇಬ್ಬರು ಮಕ್ಕಳಿಗೂ ಸಮವಾಗಿ ಹಂಚುವಂತೆ ತಿಳಿಸಿದ್ದರು. ಆದರೆ ಗಲಾಟೆಯಿಂದಾಗಿ ಜಮೀನಿನಲ್ಲಿ ಉಳುಮೆ ಮಾಡಲು ತೆರಳಿರುವ ಚಿತ್ತಣ್ಣ ಹಾಗೂ ಬೆಂಬಲಿಗರಾದ ಬಸವರಾಜ್, ಬೆಲ್ಲಣ್ಣ, ಜಯ್ಯಣ್ಣ ಮತ್ತು ರೇವಣ್ಣ ಅವರನ್ನು ಜಮೀನು ಸರ್ವೆಯಾಗಿ, ಇಬ್ಭಾಗವಾಗುವವರೆಗೆ ಉಳುಮೆಮಾಡದಂತೆ ತಡೆದ ಪರಿಣಾಮ ಗಲಭೆ ಶುರುವಾಗಿದೆ.


Spread the love

About Laxminews 24x7

Check Also

ಅಪ್ರಾಪ್ತೆ ತಂಗಿಗೆ ಮಗು ಕರುಣಿಸಿ ಜೈಲುಪಾಲಾದ ಭೂಪ!

Spread the loveಕೊಪ್ಪಳ, ನವೆಂಬರ್​ 06: ನಿನ್ನನ್ನು ಮದುವೆ ಆಗುತ್ತೇನೆ ಎಂದು ಪುಸಲಾಯಿಸಿ ಸ್ವಂತ ಅಣ್ಣನೇ ಅಪ್ರಾಪ್ತೆ ತಂಗಿ ಜೊತೆ ದೈಹಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ