ರಾಯಚೂರು: ಯುಗಾದಿ ಹಬ್ಬ ಭಾರತೀಯರ ಹೊಸ ವರ್ಷದ ಮೊದಲ ಹಬ್ಬ. ಈ ವಿಶೇಷ ದಿನದಂದು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಮಾರಟೇಶ್ವರ ದೇವಾಲಯದ ಉದ್ಬವ ಲಿಂಗಕ್ಕೆ ಸೂರ್ಯ ರಶ್ಮಿ ನೇರವಾಗಿ ಬೀಳುತ್ತದೆ. ಹೀಗಾಗಿ ಇಲ್ಲಿನ ಭಕ್ತರು ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ.ಯುಗಾದಿ ಸಂದರ್ಭದಲ್ಲಿ ಎರಡು ಮೂರುದಿನಗಳ ಕಾಲ ಸೂರ್ಯ ರಶ್ಮಿ ಲಿಂಗದ ಮೇಲೆ ಬೀಳುತ್ತದೆ. ಆದರೆ ಹಬ್ಬದ ದಿನ ಮಾತ್ರ ಸೂರ್ಯೋದಯವಾಗುತ್ತಿದ್ದಂತೆ ನೇರವಾಗಿ ಹೊಂಗಿರಣಗಳು ಲಿಂಗದ ಮೇಲೆ ಬೀಳುತ್ತದೆ. 7ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಈ ದೇವಸ್ಥಾನವನ್ನು ಎರಡನೇ ಶ್ರೀಶೈಲ ಅಂತಲೂ ಕರೆಯುತ್ತಾರೆ.
ಸೂರ್ಯನ ಚಲನೆ ಆಧಾರದ ಮೇಲೆ ನಿರ್ಮಿಸಲಾಗಿರುವ ವಿಶಿಷ್ಟ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯ ಪ್ರತಿವರ್ಷ ಯುಗಾದಿಯ ದಿನ ಈ ಅಚ್ಚರಿಗೆ ಕಾರಣವಾಗುತ್ತಿದೆ