Breaking News

ಗುಜರಾತ್​ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿರುವ ಆಮ್ ಆದ್ಮಿ

Spread the love

ಕೇಜ್ರಿವಾಲ್​ ಮತ್ತು ಭಗವಂತ್ ಮಾನ್ ಇಬ್ಬರೂ ಇಂದು ಮೊದಲು ಸಬರಮತಿ ಆಶ್ರಮಕ್ಕೆ ಭೇಟಿ ಕೊಟ್ಟು ಅಲ್ಲಿಂದ 2 ಕಿಮೀ ದೂರದವರೆಗೆ ರೋಡ್ ಶೋ ನಡೆಸಲಿದ್ದಾರೆ. ಇದಕ್ಕೆ ಪಕ್ಷ ತಿರಂಗ ಯಾತ್ರಾ ಎಂದು ಹೆಸರಿಟ್ಟುಕೊಂಡಿದೆ.ದೆಹಲಿ: ಅರವಿಂದ್​ ಕೇಜ್ರಿವಾಲ್(Arvind Kejriwal)​ಅವರ ಆಮ್​ ಆದ್ಮಿ ಪಕ್ಷ(Aam Aadmy Party)ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಿದೆ.

ಈ ಬಾರಿ ಚುನಾವಣೆಯಲ್ಲಿ ಪಂಜಾಬ್​ ರಾಜ್ಯವನ್ನು ಗೆದ್ದುಕೊಂಡಿದೆ. ಇದೀಗ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್​​ನಲ್ಲಿ ಪಕ್ಷದ ಪ್ರಾಬಲ್ಯ ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ. ಗುಜರಾತ್​​ನಲ್ಲಿ ಇಂದಿನಿಂದ (ಏಪ್ರಿಲ್​ 2) ಆಪ್​ ಪಕ್ಷ ವಿವಿಧ ಕಾರ್ಯಕ್ರಮಗಳನ್ನು ನಡೆಸಲಿದ್ದು, ಅಲ್ಲಿನ ಜನರನ್ನು ಸೆಳೆಯುವ ಪ್ರಯತ್ನದಲ್ಲಿ ತೊಡಗಿದೆ. ಗುಜರಾತ್​​ನಲ್ಲಿ 1995ರಿಂದ ಇಲ್ಲಿಯವರೆಗೆ ಬಿಜೆಪಿ ಪಕ್ಷವೇ ಆಡಳಿತದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ರಾಜ್ಯವರು. ಕಾಂಗ್ರೆಸ್​​ ಕೈಯಲ್ಲಿದ್ದ ಪಂಜಾಬ್​​ನಲ್ಲಿ ಸರ್ಕಾರ ರಚನೆ ಮಾಡಿದ ಆಪ್​ ಇದೀಗ ಪ್ರಧಾನಿ ಮೋದಿ ತವರು ರಾಜ್ಯಕ್ಕೇ ಪ್ರವೇಶ ಮಾಡಿದೆ. ಅಷ್ಟೇ ಅಲ್ಲ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಮತ್ತು ಪಂಜಾಬ್​ ಸಿಎಂ ಭಗವಂತ್ ಮಾನ್​ ಇಬ್ಬರೂ ಈಗಾಗಲೇ ಅಹ್ಮದಾಬಾದ್​ಗೆ ತೆರಳಿದ್ದಾರೆ.

ಕೇಜ್ರಿವಾಲ್​ ಮತ್ತು ಭಗವಂತ್ ಮಾನ್ ಇಬ್ಬರೂ ಇಂದು ಮೊದಲು ಸಬರಮತಿ ಆಶ್ರಮಕ್ಕೆ ಭೇಟಿ ಕೊಟ್ಟು ಅಲ್ಲಿಂದ 2 ಕಿಮೀ ದೂರದವರೆಗೆ ರೋಡ್ ಶೋ ನಡೆಸಲಿದ್ದಾರೆ. ಇದಕ್ಕೆ ಪಕ್ಷ ತಿರಂಗ ಯಾತ್ರಾ ಎಂದು ಹೆಸರಿಟ್ಟುಕೊಂಡಿದೆ. ಬಳಿಕ ಭಾನುವಾರ ಇವರಿಬ್ಬರೂ ಅಹ್ಮದಾಬಾದ್​​ನ ಸ್ವಾಮಿನಾರಾಯಣ್​ ದೇಗುಲಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸುವರು. ಗುಜರಾತ್​ನಲ್ಲಿ 2017ರ ವಿಧಾನಸಭೆ ಚುನಾವಣೆಯಲ್ಲಿಯೂ ಆಪ್​ ಪಕ್ಷ ಸ್ಪರ್ಧಿಸಿತ್ತು. ಆದರೆ ಒಂದೇ ಒಂದು ಕ್ಷೇತ್ರವನ್ನು ಗೆಲ್ಲಲೂ ವಿಫಲವಾಗಿತ್ತು. ಒಟ್ಟು 29 ಕ್ಷೇತ್ರಗಳು ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಎಲ್ಲರೂ ಸೋತಿದ್ದರು. ಆದರೆ ಈ ಬಾರಿ ಅರವಿಂದ್ ಕೇಜ್ರಿವಾಲ್​ ತುಂಬ ಮುಂಚಿನಿಂದಲೇ ಪಕ್ಷವನ್ನು ಪ್ರಬಲ ಗೊಳಿಸಲು ಪ್ರಾರಂಭಿಸಿದ್ದಾರೆ.

 


Spread the love

About Laxminews 24x7

Check Also

ಪ್ರಿಯಕರನ ಜೊತೆ ಸೇರಿ ತಾಯಿಯಿಂದಲೇ ಮಗಳ ಕೊಲೆ: ಕಠಿಣ ಶಿಕ್ಷೆಗೆ ಸಂಬಂಧಿಕರ ಆಗ್ರಹ

Spread the love ಹಾವೇರಿ: ಪ್ರಪಂಚದಲ್ಲಿ ಕೆಟ್ಟ ತಂದೆ ಇರಬಹುದು. ಆದ್ರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಆದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ