ಭುವನೇಶ್ವರ: ಇದು ಇಬ್ಬರ ಜಗಳದಲ್ಲಿ ಮೂರನೆಯವ ಮಧ್ಯಪ್ರವೇಶಿಸಿರುವ ಸುದ್ದಿ. ಪ್ರೇಮಿಗಳ ಜಗಳದಲ್ಲಿ ಎಂಟ್ರಿಯಾದ ಫುಡ್ ಡೆಲಿವರಿ ಬಾಯ್, ಯುವತಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾನೆ.
ಒಡಿಶಾದ ಭುವನೇಶ್ವರದಲ್ಲಿ ಪ್ರೇಮಿಗಳ ಜಗಳದಲ್ಲಿ ಮಧ್ಯಪ್ರವೇಶಿಸಿದ ಆಹಾರ ವಿತರಣಾ ವ್ಯಕ್ತಿ ಯುವತಿಗೆ ಥಳಿಸಿದ್ದಾನೆ.
ಇದರಿಂದ ಪ್ರೇಮಿಗಳ ಜಗಳದಲ್ಲಿ ಮೂರನೇಯವನ ಎಂಟ್ರಿಯಿಂದ ಬೀದಿ ಕಾಳಗವಾಗಿ ಮಾರ್ಪಟ್ಟಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ಪಾರ್ಕ್‌ನಿಂದ ಹೊರಬಂದ ನಂತರ ಯುವತಿ ತನ್ನ ಗೆಳೆಯನೊಂದಿಗೆ ತೀವ್ರ ಜಗಳವಾಡಿದ್ದಾಳೆ. ಆಕೆ ತನ್ನ ಬಾಯ್‌ಫ್ರೆಂಡ್‌ಗೆ ನಿಂದಿಸಿದ್ದಾಳೆ. ಆತನ ಮೇಲೆ ಕೈ ಮಾಡಿದ್ದಲ್ಲದೆ ಕಲ್ಲು ಎಸೆದಿದ್ದಾಳೆ. ಈ ವೇಳೆ ಸ್ಥಳಕ್ಕೆ ಜಮಾಯಿಸಿದ ಸ್ಥಳೀಯರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಯುವತಿ ಜನರ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾಳೆ.
ಈ ವೇಳೆ ಆಹಾರ ವಿತರಣಾ ಕಾರ್ಯನಿರ್ವಾಹಕ ಮಧ್ಯಪ್ರವೇಶಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾನೆ. ಆದರೆ, ಆತನನ್ನೂ ಅಸಭ್ಯವಾಗಿ ನಿಂದಿಸಿದ್ದಾಳೆ. ಇದರಿಂದ ಮಾತಿನ ಚಕಮಕಿ ಉಂಟಾಗಿದೆ. ಕೊನೆಗೆ ಕೋಪಗೊಂಡ ಫುಡ್ ಡೆಲಿವರಿ ಬಾಯ್ ಆಕೆಯನ್ನು ಥಳಿಸಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಇತರರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಹಬದಿಗೆ ತರಲು ಪ್ರಯತ್ನಿಸಿದ್ದಾರೆ.
ಇನ್ನು ಈ ವಿಷಯ ಸಂಬಂಧ ಯುವತಿಯಾಗಲಿ ಅಥವಾ ಡೆಲಿವರಿ ಎಕ್ಸಿಕ್ಯೂಟಿವ್ ಆಗಲಿ ಇದುವರೆಗೆ ಪೊಲೀಸ್ ದೂರು ದಾಖಲಿಸಿಲ್ಲ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲು ಪೊಲೀಸರು ತೀರ್ಮಾನಿಸಿದ್ದಾರೆ.
Girl direct volley of expletives, beat up Boyfriend in full public glare outside #IG Park in #Bhubaneswar pic.twitter.com/7ZVUrfz7Wd
— S U F F I A N (@iamsuffian) March 31, 2022