ಬೆಂಗಳೂರು: ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಐಎಂಎ ಕಂಪನಿಯಿಂದ ಬಹುಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಏಪ್ರಿಲ್ 4ರಿಂದ ಠೇವಣಿದಾರರ ಚಿನ್ನಾಭರಣ ಹಿಂದಿರುಗಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಕ್ಷಮ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
ಚಿನ್ನಾಭರಣ ಹಿಂಪಡೆಯುವ ಮುನ್ನ ಸಾಲ ಪಾವತಿಸತಕ್ಕದ್ದು. ಬಾಕಿ ಹಣ ಪಾವತಿಗೆ ಏಪ್ರಿಲ್ 5ರ ಸಂಜೆ 5ರವರೆಗೂ ಅವಕಾಶ ನೀಡಲಾಗುತ್ತೆ. imaclaims.karnataka.gov.inನಲ್ಲಿ ಬಾಕಿ ಹಣ ತಿಳಿಯತಕ್ಕದ್ದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. NEFT/RTGS ಮೂಲಕ ಸಕ್ಷಮ ಪ್ರಾಧಿಕಾರದ ಖಾತೆಗೆ ಬಾಕಿ ಮೊತ್ತ ಸಲ್ಲಿಸಲು ಅವಕಾಶ ನೀಡಲಾಗಿದೆ. ಹಣ ಪಾವತಿಸಿದ UTR ಸಂಖ್ಯೆಯನ್ನು ಮೇಲೆ imaclaims.karnataka.gov.in ವೆಬ್ಸೈಟ್ನಲ್ಲಿ ಸಲ್ಲಿತಕ್ಕದ್ದು. ಚಿನ್ನಾಭರಣ ಹಿಂಪಡೆಯುವ ದಿನ SMS ಮೂಲಕ ಬರುತ್ತೆ. ದಿನಾಂಕ, ಸಮಯ ಎಸ್ಎಂಎಸ್ ಮೂಲಕ ಬರಲಿದೆ. ಹಂತಹಂತವಾಗಿ ಠೇವಣಿದಾರರ ಚಿನ್ನಾಭರಣ ವಾಪಸಾತಿ ಎಂದು ತಿಳಿಸಿದೆ.