Breaking News

ಟಿಪ್ಪು’ ಸ್ವಾತಂತ್ರ್ಯ ಯೋಧ ಎನ್ನುವುದೇ ಉತ್ಪ್ರೇಕ್ಷೆ: ಬಿಜೆಪಿ ಟೀಕೆ

Spread the love

ಬೆಂಗಳೂರು: ಟಿಪ್ಪು ಸುಲ್ತಾನ್ ಈ ದೇಶದ ಸ್ವಾತಂತ್ರ್ಯ ಯೋಧ ಎನ್ನುವುದೇ ಒಂದು ಉತ್ಪ್ರೇಕ್ಷೆ ಎಂದು ರಾಜ್ಯ ಬಿಜೆಪಿ ಘಟಕವು ಟೀಕಿಸಿದೆ.

ಈ ಕುರಿತು ಬುಧವಾರ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಉತ್ತರ ಭಾರತದಲ್ಲಿ ಔರಂಗಜೇಬ್, ದಕ್ಷಿಣದಲ್ಲಿ ಟಿಪ್ಪು ಸುಲ್ತಾನ್ ಮತಾಂಧ ರಾಜಸತ್ತೆಯ ಸೃಷ್ಟಿಕರ್ತರು.

ಕತ್ತಿಯ ಮೊನೆಯಿಂದ ಅಮಾಯಕರ ಬದುಕು ಕಸಿದುಕೊಂಡ ಮತಾಂಧರಿವರು. ಇಂಥ ಮತೀಯ ಸುಳ್ಳು ಇತಿಹಾಸವನ್ನು ನಮ್ಮ ಮಕ್ಕಳು ಓದಬೇಕೇ?’ ಎಂದು ಪ್ರಶ್ನಿಸಿದೆ.

‘ಟಿಪ್ಪು ಸುಲ್ತಾನ್ ಈ ದೇಶದ ಸ್ವಾತಂತ್ರ್ಯ ಯೋಧ ಎನ್ನುವುದೇ ಒಂದು ಉತ್ಪ್ರೇಕ್ಷೆ ಹಾಗೂ ತಿರುಚಿದ ಸತ್ಯ. ಶಾಲಾ- ಪಠ್ಯ ಕ್ರಮದಲ್ಲಿ ಇಂಥ ಸುಳ್ಳುಗಳೇಕೆ ಇರಬೇಕು? ವಿದ್ಯಾರ್ಥಿಗಳಿಗೆ ಮತಾಂಧರ ತಿರುಚಿದ ಇತಿಹಾಸ ಕಲಿಸುವುದು ಎಷ್ಟು ಸರಿ?’ ಎಂದು ಬಿಜೆಪಿ ಕೇಳಿದೆ.

‘ನೆತ್ತರಕೆರೆ, ಮಡಿಕೇರಿಯಲ್ಲಿ ಟಿಪ್ಪು ನಡೆಸಿದ ನರಮೇಧ ಮರೆಯಲು ಸಾಧ್ಯವೇ? ‌ಮತಾಂತರವಾಗು, ಶರಣಾಗು, ಇಲ್ಲವೇ ಪ್ರಾಣತ್ಯಾಗ ಮಾಡು ಎಂಬುದು ಟಿಪ್ಪು ರಾಜನೀತಿ. ಒಂದೇ ಒಂದು ಯುದ್ಧವನ್ನು ನೇರಮಾರ್ಗದಲ್ಲಿ ಗೆಲ್ಲದ‌ ಮತಾಂಧನಿಗೆ ಮೈಸೂರು ಹುಲಿ ಎಂಬ ಬಿರುದು ಪ್ರಾಪ್ತವಾಗಿದ್ದೇ ಒಂದು ಚೋದ್ಯ. ನೈಜತೆ ಬಯಲಾಗಲೇಬೇಕಲ್ಲವೇ?’ ಎಂದು ಬಿಜೆಪಿ ಟ್ವೀಟಿಸಿದೆ.


Spread the love

About Laxminews 24x7

Check Also

ಉಗಾರದಲ್ಲಿ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ ಹತ್ಯೆ ಹಿನ್ನೆಲೆ – ಗ್ರಾಮಸ್ಥರ ಉಗ್ರ ಪ್ರತಿಭಟನೆ

Spread the love ಉಗಾರದಲ್ಲಿ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ ಹತ್ಯೆ ಹಿನ್ನೆಲೆ – ಗ್ರಾಮಸ್ಥರ ಉಗ್ರ ಪ್ರತಿಭಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ