ಮುಧೋಳ: ಜಮಖಂಡಿ ತಾಲ್ಲೂಕು ನಾವಲಗಿ ಗ್ರಾಮದ ಪ್ರಗತಿಪರ ರೈತ ಬಸಪ್ಪ ಸದಪ್ಪ ಮುಗಳಖೋಡ ತಮ್ಮ ಜಮೀನಿನಲ್ಲಿ ಬೆಳೆದ 53.79 ಟನ್ ಕಬ್ಬನ್ನು ತಮ್ಮ ಟ್ರ್ಯಾಕ್ಟರ್ ನಲ್ಲಿ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆಗೆ ಸಾಗಿಸಿ ದಾಖಲೆ ಮಾಡಿದರು.
ನಿರಾಣಿ ಸಕ್ಕರೆ ಕಾರ್ಖಾನೆಯ ಕಬ್ಬು ವಿಭಾಗದ ನಿರ್ದೇಶಕ ಎನ್.ವಿ ಪಡಿಯಾರ ಮತ್ತು ಡಿ.ಬಿ.ನಾಯಕ, ಕೆ.
ದ್ವಾರಕೀಶ್, ಅವರು ಪ್ರಗತಿಪರ ರೈತ ಬಸಪ್ಪ ಅವರನ್ನು ಸನ್ಮಾನಿಸಿದರು.
‘53.79 ಟನ್ ಕಬ್ಬು ಸಾಗಿಸಿರುವುದು ಸಾರ್ವಕಾಲಿಕ ದಾಖಲೆಯಾಗಿದೆ’ ಎಂದು ಪಡಿಯಾರ್ ತಿಳಿಸಿದರು.
Laxmi News 24×7