ಬೆಂಗಳೂರು: ಇತ್ತೀಚೆಗೆ ತುಮಕೂರು ಜಿಲ್ಲೆಯ ಪಾವಗಡಲ್ಲಿ ಸಂಭವಿಸಿದ್ದ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಮಹೇಂದ್ರ(19) ಇಂದು ಕೊನೆಯುಸಿರೆಳೆದಿದ್ದಾನೆ. ಇತ್ತ ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ಪತ್ರೆಗಳಲ್ಲಿ ಸರಿಯಾದ ಸಮಯಕ್ಕೆ ಬೆಡ್ ನೀಡದೇ ನಮ್ಮ ಮಗನನ್ನು ಸಾಯಿಸಿಬಿಟ್ಟರು ಎಂದು ಮೃತ ಯುವಕನ ತಂದೆ ಆಕ್ರೋಶ ವ್ಯಕ್ತಪಡಿಸಿದರು.
ವಿಕ್ಟೋರಿಯಾ ಆಸ್ಪತ್ರೆ ಶವಾಗಾರದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಯುವಕನ ತಂದೆ ಶ್ರೀನಿವಾಸ್, ಅಪಘಾತ ಸಂಭವಿಸಿದ ದಿನ ನಿಮ್ಹಾನ್ಸ್ನಲ್ಲಿ ಬೆಡ್ ಕೊಟ್ಟಿದ್ದರೆ ನನ್ನ ಮಗ ಉಳಿಯುತ್ತಿದ್ದ. ಬೆಡ್ ಕೊಡದೆ ಅಲ್ಲಿ ಇಲ್ಲಿ ಅಲೆದಾಡುವಂತಾಯಿತು. ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿಯಾದರೂ, ಬಡವರಿಗೆ ಬೆಡ್ ಕೊಡದೇ ಆತನನ್ನು ಸಾಯಿಸಿದರು ಎಂದು ಕಣ್ಣೀರಿಟ್ಟರು.