ಬೆಂಗಳೂರು: ಈಗಾಗಲೇ ಪುನೀತ್ ರಾಜ್ ಕುಮಾರ್ ( Actor Puneet Rajkumar ) ಹೆಸರನ್ನು ಅವರ ನಿಧನಾನಂತ್ರ ಅಮರವಾಗಿಸುವ ನಿಟ್ಟಿನಲ್ಲಿ, ವೃತ್ತ, ರಸ್ತೆಗಳಿಗೆ ಅವರ ಹೆಸರಿನ್ನು ಇಡಲಾಗಿದೆ. ಇದಲ್ಲದೇ ಉಪಗ್ರಹಕ್ಕೂ ಅವರ ಹೆಸರಿನ್ನು ಇಡಲಾಗಿತ್ತು.
ಈ ಬಳಿಕ, ಈಗ 4ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿಯೂ ( Annual Exam ) ಅಪ್ಪು ಬಗ್ಗೆ ಪ್ರಶ್ನೆಯನ್ನು ಕೇಳಲಾಗಿದೆ.
ಹೌದು.. ಬೆಂಗಳೂರಿನ ವಿಜಯನಗರ ಬಳಿಯ ಆರ್ ಪಿ ಸಿ ಲೇಔಟ್ ನಲ್ಲಿರುವಂತ ದಿ ನ್ಯೂ ಕೇಂಬ್ರಿಡ್ಜ್ ಇಂಗ್ಲೀಷ್ ಶಾಲೆಯಲ್ಲಿ ಇದೇ ಮಾರ್ಚ್ 2022ರಲ್ಲಿ 4ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಮಕ್ಕಳಿಗೆ ನೀಡಲಾಗಿದ್ದಂತ ವಾರ್ಷಿಕ ಪರೀಕ್ಷೆಯಲ್ಲಿ, ಪುನೀತ್ ರಾಜ್ ಕುಮಾರ್ ಕುರಿತಂತೆ ಪ್ರಶ್ನೆ ಕೇಳಲಾಗಿದೆ.
ಐಸಿಎಸ್‌ಇ ಪಠ್ಯಕ್ರಮದ 4ನೇ ತರಗತಿ ವಿದ್ಯಾರ್ಥಿಗಳ 2ನೇ ಭಾಷೆಯಾದಂತ ಕನ್ನಡ ಭಾಷಾ ಪರೀಕ್ಷೆಯಲ್ಲಿ ಪುನೀತ್ ರಾಜ್ ಕುಮಾರ್ ಕುರಿತಂತೆ ಗದ್ಯ ಭಾಗವನ್ನು ನೀಡಿ ಪ್ರಶ್ನೆ ಕೇಳಲಾಗಿದೆ. ಗದ್ಯ ಭಾಗವನ್ನು ಓದಿ, ಉತ್ತರಿಸುವಂತೆ ಸೂಚಿಸಿದ್ದಾಗಿ ತಿಳಿದು ಬಂದಿದೆ.