ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯುಪಿ ಮಾಡೆಲ್ ಅನುಸರಿಸಿ ರಾಜ್ಯದಲ್ಲಿ ಬೆಂಕಿ ಹಚ್ಚಲು ಮುಂದಾಗಿದ್ದಾರೆ, ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿಪರ ಚರ್ಚೆಯ ಬದಲು ಧರ್ಮದ ಆಧಾರದ ಅನಗತ್ಯ ಕಲಹಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ದಾರಿ ತಪ್ಪಿದ ಮಗ’ನನ್ನು ನೋಡಿ ದಿವಂಗತ ಎಸ್ ಆರ್ ಬೊಮ್ಮಾಯಿಯವರ ಆತ್ಮ ಅದೆಷ್ಟು ಕೊರಗುತ್ತಿದೆಯೋ. #ಬಿಲ್ಡಪ್ ಬೊಮ್ಮಾಯಿ ಎಂದು ಲೇವಡಿ ಮಾಡಿದೆ.ವೈಯಕ್ತಿಕ ವೈಷಮ್ಯಕ್ಕೆ ಕೊಲೆಯಾದ ಕುಟುಂಬಕ್ಕೆ 25 ಲಕ್ಷ ನೀಡಿದ ಸರ್ಕಾರ ಬಿಜೆಪಿ ಕಾರ್ಯಕರ್ತನಿಂದ ಹತ್ಯೆಯಾದ ದಲಿತ ದಿನೇಶ್ ಕುಟುಂಬಕ್ಕೆ ಇನ್ನೂ ಪರಿಹಾರ ನೀಡಿಲ್ಲವೇಕೆ? ಕರ್ನಾಟಕ ಬಿಜೆಪಿ ದೃಷ್ಟಿಯಲ್ಲಿ ದಲಿತರು ಹಿಂದುಗಳಲ್ಲವೇ? ಬಿಎಸ್ ಬೊಮ್ಮಾಯಿ ಅವರೇ, ಈ ಹೆಣ್ಣುಮಗಳ ಪ್ರಶ್ನೆಗೆ ಉತ್ತರಿಸುವ ತಾಕತ್ತಿದೆಯೇ? ಅವರ ನೋವು ಅರ್ಥವಾಗುತ್ತದೆಯೇ? ಪ್ರಶ್ನಿಸಿದೆ.
ಬೊಮ್ಮಾಯಿಯವರು ತಮ್ಮ ಅಭಿವೃದ್ಧಿ ಕೆಲಸಗಳನ್ನು ತೋರಿಸಿ ಮತ ಕೇಳಲು ಮುಖವಿಲ್ಲದೆ ಚುನಾವಣೆಗೆ ಮತೀಯ ವಿಷಯಗಳನ್ನು ಮುಂದಿಡಲು ನೆಲ ಹದಗೊಳಿಸುತ್ತಿದ್ದಾರೆ. ಆಕ್ಷನ್‌ಗೆ ರಿಯಾಕ್ಷನ್ ಎಂದಾಗಲೇ ಅವರೊಳಗಿನ ಕ್ರೌರ್ಯದ ಮುಖ ಅನಾವರಣವಾಯ್ತು. ಅಲ್ಲಿಂದ ಇಲ್ಲಿಯವರೆಗೂ ರಾಜ್ಯದಲ್ಲಿ ಅಭಿವೃದ್ಧಿ ಆಧಾರಿತ ಚರ್ಚೆಯೇ ನಡೆದಿಲ್ಲ.
ಕ್ರಿಯೆಗೆ ಪ್ರತಿಕ್ರಿಯೆ ಎಂದು ಗೂಂಡಾಗಿರಿಗೆ ಒಪ್ಪಿಗೆ, ಮತಾಂತರ ನಿಷೇಧ ಮಸೂದೆ, ತ್ರಿವರ್ಣಧ್ವಜಕ್ಕೆ ಅವಮಾನ, ಹಿಜಾಬ್ v/s ಕೇಸರಿ ಶಾಲು , ಹರ್ಷ ಕೊಲೆ ಪ್ರಕರಣದ ವೈಭವೀಕರಣ, ಕಾಶ್ಮೀರ್ ಫೈಲ್ಸ್ ಪ್ರಚಾರ, ವ್ಯಾಪಾರಕ್ಕೂ ಕೋಮುದ್ವೇಷದ ಲೇಪ #ಬಿಲ್ಡಪ್ ಬೊಮ್ಮಾಯಿ ಅವರೇ, ಇದೇ ಅಲ್ಲವೇ ನಿಮ್ಮ ಸಾಧನೆಯ ಪಟ್ಟಿ, ಇದಲ್ಲದೆ ಬೇರೆನಿದೆ? ಎಂದು ಕಾಂಗ್ರೆಸ್ ಟೀಕಿಸಿದೆ.
Laxmi News 24×7