ಬೆಂಗಳೂರು: ಕಟಿಬದ್ಧ ಸ್ನೇಹಿತರೇ ಆದರೂ ಯಾವುದೋ ಒಂದು ಚಿಕ್ಕ ವಿಷಯಕ್ಕೆ ಬದ್ಧವೈರಿಗಳಾಗಿಬಿಡುತ್ತಾರೆ. ಅಂಥದ್ರದಲ್ಲಿ ರಾಜಕೀಯ ವೈರಿಗಳು, ಸಿದ್ಧಾಂತ ವಿಚಾರದಲ್ಲಿ ವಿಭಿನ್ನ ನಿಲುವು ಹೊಂದಿರೋರು ಆತ್ಮೀಯರಾಗಿ ಇರೋದು ತುಂಬಾನೇ ಕಡಿಮೆ. ಆದರೆ ರಾಜ್ಯದ ಹಿರಿಯ ರಾಜಕೀಯ ಮುತ್ಸದ್ಧಿಗಳಾದ ಸಿದ್ದರಾಮಯ್ಯ ಹಾಗೂ ಬಿ.ಎಸ್.ಯಡಿಯೂರಪ್ಪ ಈ ವಿಚಾರದಲ್ಲಿ ತುಂಬಾ ಭಿನ್ನ.
ರಾಜಕೀಯ ವಿಚಾರದಲ್ಲಿ ಎಷ್ಟೇ ಕೆಸರೆರಚಾಡಿಕೊಂಡರೂ ವೈಯಕ್ತಿಕ ವಿಚಾರ, ಮಾನವೀಯ ನಿಲುವು ಅಂತಾ ಬಂದಾಗ ತುಂಬಾ ವಿನಮ್ರತೆಯಿಂದ ನಡೆದುಕೊಳ್ತಾರೆ. ಮೊದಲಿನಿಂದಲೂ ‘ಮಾದರಿ ನಡವಳಿಕೆ’ಯಲ್ಲಿ ಸೈಎನಿಸಿಕೊಂಡಿರುವ ಹಿರಿಯ ನಾಯಕರು ಇಂದು ಕೂಡ ಗ್ರೇಟ್ ಎನಿಸಿಕೊಂಡರು. ಸಮಾಜದಲ್ಲಿ ಉಂಟಾಗಿರುವ ಚಿಕ್ಕ ಕಲುಷಿತ ವಾತಾವರಣದಿಂದ ಜನಸಾಮಾನ್ಯರು ಗೊಂದಲಕ್ಕೆ ಹಾಗೂ ಆತಂಕಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಉಭಯ ನಾಯಕರು ಸೂಚ್ಯವಾಗಿ ನಡೆದುಕೊಂಡು ಸಮಾಜಕ್ಕೆ ಒಗ್ಗಟ್ಟಿನ ಸಂದೇಶವನ್ನ ಸಾರಿದ್ದಾರೆ.