ನವದೆಹಲಿ: ನಗರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಲ್ಲಿನ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಸೇವೆ ಆರಂಭಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಉಚಿತ ಬಸ್ ಸೇವೆ ಆನಂದಿಸಲು ಯುವಕನೊಬ್ಬ ತನ್ನ ಎಲ್ಲ ಮಿತಿಗಳನ್ನು ದಾಟಿದ್ದಾನೆ. ಹುಡುಗಿಯಂತೆ ರೆಡಿಯಾದ ಯುವಕ ಬಸ್ವೊಂದಕ್ಕೆ ಹತ್ತಿ ಪ್ರಯಾಣಿಸುತ್ತಿದ್ದನು. ಆದರೆ ಆತ ಕಂಡಕ್ಟರ್ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.
ಹೌದು, ಉಚಿತ ಬಸ್ ಸೌಲಭ್ಯ ಆನಂದಿಸಲು ಯುವಕನೊಬ್ಬ ಹುಡುಗಿಯಂತೆ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಸ್ನಲ್ಲಿ ಪ್ರಯಾಣಿಸುತ್ತಿದ್ದ. ಬಸ್ನಲ್ಲಿ ಬಾಲಕಿಯಂತೆ ಕಾಣುತ್ತಿದ್ದ ಯುವಕನ ವರ್ತನೆ ಬದಲಾಗಿದೆ. ಆತನ ವರ್ತನೆ ಬಗ್ಗೆ ಅನುಮಾನಗೊಂಡ ಕಂಡಕ್ಟರ್ ಯುವಕನಿಗೆ ಮಾಸ್ಕ್ ತೆಗೆಯುವಂತೆ ಹೇಳಿದ್ದಾನೆ. ಯುವಕ ಮಾಸ್ಕ್ ತೆಗೆದ ತಕ್ಷಣ ಆತನ ಸಂಪೂರ್ಣ ವೇಷ ಸ್ಫೋಟಗೊಂಡಿತು.