ಬೆಂಗಳೂರು: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್ ವರ್ತಕರಿಗೆ ವ್ಯಾಪಾರಕ್ಕೆ ನಿರ್ಬಂಧ ವಿಚಾರ ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿ ಮಾಡಿತ್ತು.
ಕಾಂಗ್ರೆಸ್ ಮುಸ್ಲಿಂ ಶಾಸಕರು ಮತ್ತು ಬಿಜೆಪಿಯ ಕರಾವಳಿ ಭಾಗದ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು. ವ್ಯಾಪಾರ ನಿರ್ಬಂಧದ ಭಿತ್ತಿಪತ್ರ ಹಾಕಿದವರು ಹೇಡಿಗಳು, ಕ್ರೂರಿಗಳ ಎಂದ ಖಾದರ್ ಹೇಳಿಕೆ ಗದ್ದಲವನ್ನು ಎಬ್ಬಿಸಿತು. ಶೂನ್ಯ ವೇಳೆಯಲ್ಲಿ ಶಾಸಕ ಯು.ಟಿ.ಖಾದರ್ ವಿಷಯ ಪ್ರಸ್ತಾಪಿಸಿ ರಾಜ್ಯದ ಕೆಲ ಕಡೆ ಧಾರ್ಮಿಕ ಕೇಂದ್ರಗಳಲ್ಲಿ ಕೆಲವು ಧರ್ಮದವರು ವ್ಯಾಪಾರ ಮಾಡಬಾರದು ಎಂದು ಬ್ಯಾನರ್ ಹಾಕ್ತಾರೆ, ಈ ರೀತಿ ಬ್ಯಾನರ್ ಹಾಕಿ ನಿಬರ್ಂಧ ಮಾಡಿರೋರು ಹೇಡಿಗಳು, ಕ್ರೂರಿಗಳು ಎಂದು ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ಖಾದರ್ ಹೇಳಿಕೆಗೆ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಹೇಡಿಗಳು ಎಂದು ಯಾರಿಗೆ ಹೇಳೋದು? ಎಂದು ಸಿಟ್ಟಾದ ಉಡುಪಿ ಜಿಲ್ಲೆಯ ಶಾಸಕರು, ಮಂಗಳೂರು ಜಿಲ್ಲೆಯ ಶಾಸಕರು ಕಿಡಿಕಾರಿದ್ರು. ಆಗ ನಾನು ಯಾವುದೇ ಧರ್ಮದವರನ್ನು ಪ್ರಸ್ತಾಪ ಮಾಡಿಲ್ಲ ಎಂದು ಖಾದರ್ ಸಮರ್ಥನೆಗೆ ಇಳಿದ್ರು. ಆಗ ಮತ್ತೆ ಖಾದರ್ ಮೇಲೆ ಬಿಜೆಪಿ ಶಾಸಕರಾದ ಹರೀಶ್ ಪೂಂಜಾ, ರಘುಪತಿ ಭಟ್, ರೇಣುಕಾಚಾರ್ಯ, ಸತೀಶ್ ರೆಡ್ಡಿ ಮುಗಿಬಿದ್ದು ಆಕ್ರೋಶ ಹೊರಹಾಕಿದರು.
Laxmi News 24×7