Breaking News

ಮೂವರು ಹೆಂಡ್ತಿಯರ ಗಂಡನ ಕೊಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್ಎ ರಡನೇ ಪತ್ನಿಯೇ ತನ್ನ ಪತಿಯನ್ನು ಕೊಲ್ಲಲು ಲಕ್ಷಗಟ್ಟಲೇ ಸುಪಾರಿ

Spread the love

ಬೆಳಗಾವಿ: ಬೆಳಗಾವಿಯ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಪ್ರಕರಣ ಭೇದಿಸುವಲ್ಲಿ ಗ್ರಾಮೀಣ ‌ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಗಂಡನ ಬ್ಯುಸಿನೆಸ್ ಪಾರ್ಟ್ನರ್​ಗಳ ಜತೆಗೂಡಿ ಎರಡನೇ ಪತ್ನಿಯೇ ಹತ್ಯೆಗೆ ಸುಪಾರಿ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ. ಕೊಲೆಯಾದವನ ಎರಡನೇ ಪತ್ನಿ ಸೇರಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಗಂಡನ ಕೊಲೆ : ಬೆಳಗಾವಿಯ ಭವಾನಿ ನಗರದ ಗಣಪತಿ ಮಂದಿರ ಬಳಿ ಮಾ.15 ರಂದು ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್​ನ್ನು (46) ಬರ್ಬರವಾಗಿ ಕೊಲೆ ಮಾಡಲಾಗಿತ್ತು. ರಾಜು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ಹಂತಕರು ಹತ್ಯೆ ಮಾಡಿ ಪರಾರಿಯಾಗಿದ್ದರು. ರಾಜು ದೊಡ್ಡಬೊಮ್ಮನ್ನವರ್ ಕಾಲುಗಳಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕಿರಾತಕರು ಕೊಲೆ ಮಾಡಿದ್ದರು. ಕೌಟುಂಬಿಕ ಕಲಹ, ಹಣಕಾಸಿನ ವ್ಯವಹಾರದಲ್ಲಿನ ವೈಮನಸ್ಸು ಹತ್ಯೆಗೆ ಕಾರಣ ಎಂಬುದು ‌ತಿಳಿದುಬಂದಿತ್ತು.

ಮೂರನೇ ವಿವಾಹದ ಕಿಚ್ಚು: ಕೊಲೆಯಾಗಿದ್ದ ಉದ್ಯಮಿ ಒಟ್ಟು ಮೂರು ಮದುವೆಯಾಗಿದ್ದರು. ಮೊದಲನೇ ಮದುವೆ ವಿಚಾರ ಬಚ್ಚಿಟ್ಟು ಕಳೆದ ಎಂಟು ವರ್ಷಗಳ ಹಿಂದೆ ಮಹಾರಾಷ್ಟ್ರದ ಲಾತೂರ್ ಮೂಲದ ಕಿರಣಾ ಜೊತೆಗೆ ರಾಜು ವಿವಾಹವಾಗಿದ್ದರು. ರಾಜು ಹಾಗೂ ಕಿರಣಾಗೆ ಇಬ್ಬರು ಮಕ್ಕಳು ಸಹ ಇದ್ದರು. ಕಿರಣಾ ಜೊತೆ ವಿವಾಹ ಬಳಿಕ ರಾಜು ಮತ್ತೊಂದು ವಿವಾಹವಾಗಿದ್ದನು. ಇದು ರಾಜು ಹಾಗೂ ಕಿರಣಾ ಮಧ್ಯೆ ವೈಮನಸ್ಸಿಗೆ ಕಾರಣವಾಗಿತ್ತು.

 

ಗಂಡನ ಕೊಲೆಗೆ ಸುಪಾರಿ : ಈ ಮಧ್ಯೆ ವ್ಯವಹಾರದಲ್ಲಿ ಪಾರ್ಟ್ನರ್​ಗಳ ಜೊತೆ ರಾಜು ಕಿರಿಕ್ ಮಾಡಿಕೊಂಡಿದ್ದ. ಹೀಗಾಗಿ ಎರಡನೇ ಪತ್ನಿ, ಇಬ್ಬರು ಬ್ಯುಸಿನೆಸ್ ಪಾರ್ಟ್ನರ್‌ ಸೇರಿ ರಾಜು ಹತ್ಯೆಗೆ ಸ್ಕೆಚ್ ಹಾಕಿದ್ದರು. ಅದರಂತೆ ಮಾರ್ಚ್ 15ರ ಬೆಳಗ್ಗೆ 6 ಗಂಟೆ ಸುಮಾರಿಗೆ ರಾಜು ದೊಡ್ಡಬೊಮ್ಮನ್ನವರ್ ಹತ್ಯೆ ಮಾಡಿ ಸುಪಾರಿ ಹಂತಕರು ಪರಾರಿಯಾಗಿದ್ದರು. ಕೆಲ ಸಮಯದ ಬಳಿಕ ಘಟನಾ ಸ್ಥಳಕ್ಕೆ ಎರಡನೇ ಪತ್ನಿ ಕಿರಣಾ ಮತ್ತೋರ್ವ ಆರೋಪಿ ಧರ್ಮೇಂದ್ರ ಭೇಟಿ ನೀಡಿದ್ದರು. ತಮಗೇನು ಗೊತ್ತೇ ಇಲ್ಲ ಎಂಬ ರೀತಿಯಲ್ಲಿ ಸ್ಥಳಕ್ಕೆ ಬಂದು ಕಿರಣಾ, ಧರ್ಮೇಂದ್ರ ನಾಟಕವಾಡಿದ್ದರು.

ಪೊಲೀಸ್​ ತನಿಖೆ: ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಗ್ರಾಮೀಣ ಪೊಲೀಸರು ಮೊಬೈಲ್ ಕರೆ ವಿವರ ಪರಿಶೀಲಿಸಿದಾಗ ಬ್ಯುಸಿನೆಸ್ ಪಾರ್ಟ್ನರ್​ಗಳ ಮೇಲೆ ಅನುಮಾನ ಬಂದಿದೆ. ಆಗ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಸುಪಾರಿ ಹಂತಕರ ಪೈಕಿ ಮೂವರ ವಶಕ್ಕೆ ಪಡೆದ ಪೊಲೀಸರು ಇನ್ನು ಇಬ್ಬರು ಆರೋಪಿಗಳಿಗೆ ಶೋಧ ನಡೆಸಿದ್ದಾರೆ.

10 ಲಕ್ಷ ಸುಪಾರಿ: ಉದ್ಯಮಿ ರಾಜು ಹತ್ಯೆಗೆ ಎರಡನೇ ಹೆಂಡತಿ ಕಿರಣಾ, ಇಬ್ಬರು ಬ್ಯುಸಿನೆಸ್ ಪಾರ್ಟ್ನರ್‌ಗಳು 10 ಲಕ್ಷ ರೂ.ಗೆ ಸುಪಾರಿ ನೀಡಿದ್ದರು. ಜಯ ಕರ್ನಾಟಕ ಸಂಘಟನೆ ಬೆಳಗಾವಿ ಜಿಲ್ಲಾಧ್ಯಕ್ಷ ಸಂಜಯ್ ರಜಪೂತ್‌ ಸುಪಾರಿ ಪಡೆದಿದ್ದ. ಶಶಿಕಾಂತ ಎಂಬಾತ ಸಂಜಯ್ ರಜಪೂತ್ ಸಂಪರ್ಕಿಸಿ ಸುಪಾರಿ ನೀಡಿದ್ದನು. ಧರ್ಮೇಂದ್ರ, ಶಶಿಕಾಂತ ಹಾಗೂ ರಾಜು ಪತ್ನಿ ಕಿರಣಾ ಸೇರಿ ರಾಜು ಹತ್ಯೆಗೆ ಸ್ಕೆಚ್ ಹಾಕಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

10 ವರ್ಷ ಹಿಂದೆ ಅಪಾರ್ಟ್‌ಮೆಂಟ್ ನಿರ್ಮಾಣ ಸಂಬಂಧ ಕೊಲೆಯಾದ ರಾಜು ಆರೋಪಿಗಳಾದ ಧರ್ಮೆಂದ್ರ, ಶಶಿಕಾಂತ್ ಮಧ್ಯೆ ಪಾರ್ಟ್ನರ್‌ಶಿಪ್ ಇತ್ತು. ಗ್ಲೋಬಲ್ ಡೆವಲಪರ್ಸ್ ಹೆಸರಿನಲ್ಲಿ ಮೂವರು ಅಪಾರ್ಟ್‌ಮೆಂಟ್ ನಿರ್ಮಾಣ ಕಾರ್ಯ ಆರಂಭಿಸಿದ್ದರು. ಇಬ್ಬರೂ ಪಾರ್ಟ್ನರ್ಸ್‌ನ್ನು ದೂರವಿಟ್ಟು ರಾಜು ಆರು ಬೇರೆ ಪ್ರಾಜೆಕ್ಟ್ ಮಾಡಿದ್ದರು. ಹತ್ತು ವರ್ಷವಾದರೂ ಮೊದಲು ಆರಂಭಿಸಿದ ಪ್ರಾಜೆಕ್ಟ್ ಮುಗಿಯದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು.

 

ಮತ್ತೊಂದೆಡೆ ಮೊದಲನೇ ಮದುವೆ ಬಚ್ಚಿಟ್ಟಿದ್ದ ಎರಡನೇ ಹೆಂಡತಿ ಕಿರಣಾಗೂ ಪತಿ ರಾಜು ಮೇಲೆ ದ್ವೇಷವಿತ್ತು. ವಿವಾಹವಾಗಿ ಎರಡು ಮಕ್ಕಳಾದ ಬಳಿಕವೂ ರಾಜು ಮೂರನೇ ವಿವಾಹವಾಗಿದ್ದ. ತನ್ನ ಹಾಗೂ ತನ್ನ ಇಬ್ಬರ ಮಕ್ಕಳ ಹೆಸರಲ್ಲಿ ಆಸ್ತಿ ಮಾಡುವಂತೆ ಪತಿ ರಾಜುಗೆ ಕಿರಣಾ ಒತ್ತಾಯಿಸುತ್ತಿದ್ದಳು. ಇದಕ್ಕೆ ಸ್ಪಂದಿಸದಿರುವುದಕ್ಕೆ ಕಿರಣಾಗೆ ಸಿಟ್ಟಿತ್ತು. ಹೀಗಾಗಿ ಪತಿಯ ಬ್ಯುಸಿನೆಸ್ ಪಾರ್ಟ್ನರ್‌ಗಳ ಜತೆಗೂಡಿ ಗಂಡನ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು.

ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸಂಜಯ್ ರಜಪೂತ್ ಸಂಪರ್ಕಿಸಿ 10 ಲಕ್ಷಕ್ಕೆ ಸುಪಾರಿ ನೀಡಲಾಗಿತ್ತು. 10 ಲಕ್ಷ ಸುಪಾರಿ ಪಡೆದು ವಿಜಯ್ ಜಾಗೃತ್‌ ಎಂಬುವನಿಗೆ ಸಂಜಯ್ ರಜಪೂತ್ ಸುಪಾರಿ ನೀಡಿದ್ದ. ಮಾರ್ಚ್ 15ರಂದು ಬೆಳಗ್ಗೆ 5.30ರ ವೇಳೆ ಮನೆಯಿಂದ ಕಾರಿನಲ್ಲಿ ತೆರಳಿದ್ದ ರಾಜು ಕಾರು ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಅಟ್ಯಾಕ್ ಮಾಡಲಾಗಿತ್ತು. ಮಾರಕಾಸ್ತ್ರಗಳಿಂದ ಎರಡು ಕಾಲುಗಳ ಮೇಲೆ ಗ್ಯಾಂಗ್ ಹಲ್ಲೆ ಮಾಡಿತ್ತು. ತೀವ್ರ ರಕ್ತ ಸ್ರಾವವಾಗಿ ರಾಜು ಸ್ಥಳದಲ್ಲೇ ಮೃತಪಟ್ಟಿದ್ದನು.

ಹೀಗೆ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಗ್ರಾಮೀಣ ‌ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಮೂವರು ಆರೋಪಿಗಳು ಜೈಲುಪಾಲಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

 

 

 


Spread the love

About Laxminews 24x7

Check Also

ವಿಜಯಪುರ…:ಪಿಪಿಪಿ ವಿರುದ್ಧ ಭುಗಿಲೆದ್ದ ಆಕ್ರೋಶ: ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Spread the love ವಿಜಯಪುರ…:ಪಿಪಿಪಿ ವಿರುದ್ಧ ಭುಗಿಲೆದ್ದ ಆಕ್ರೋಶ: ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ