ಬೆಳಗಾವಿಯ ಮಂಡೋಳಿ ರಸ್ತೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮೂವರು ಆರೋಪಿಗಳನ್ನು ಬಂಧಿಸಿದ್ದ ಗ್ರಾಮೀಣ ಪೊಲೀಸರು ಇಂದು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು ಬೆಳಗಾವಿ ತಾಲೂಕಿನ ಹಲಗಾ ಬಸ್ತವಾಡ ಗ್ರಾಮದ ಸಧ್ಯ ಭವಾನಿ ನಗರದ ಸಂಸ್ಕøತಿ ಫಾಮ್ರ್ಸನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡ ಬೊಮ್ಮನ್ನವರನನ್ನು ಮಾರ್ಚ 15ರಂದು ಬೆಳ್ಳಂ ಬೆಳಿಗ್ಗೆ ಹತ್ಯೆ ಮಾಡಲಾಗಿತ್ತು. ಆರೋಪಿಗಳಿಗೆ ಬಲೆ ಬೀಸಿದ್ದ ಗ್ರಾಮೀಣ ಠಾಣೆ ಪೊಲೀಸರು ನಿನ್ನೆ ಮೃತ ರಾಜು ದೊಡ್ಡ ಬೊಮ್ಮನ್ನವರ ಪತ್ನಿ ಕಿರಣ ದೊಡ್ಡಬೊಮ್ಮನವರ, ಹಾಗೂ ಬ್ಯುಸಿನೆಸ್ ಪಾರ್ಟನರ್‍ಗಳಾದ ಹಿಂದವಾಡಿಯ ಶಶಿಕಾಂತ ಶಂಕರಗೌಡ (49) ಮತ್ತು ಖಾಸಭಾಗದ ಓಂನಗರ ನಿವಾಸಿ ಧರೆಂದ್ರ ನಲಗಂಟಿ(52) ಎಂಬ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡರು. ಅಲ್ಲದೇ ಇಂದು ಮತ್ತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದಿದೆ. ಈ ಆರೋಪಿಗಳ ವಿವರ ಇನ್ನಷ್ಟೇ ಬರಬೇಕಿದೆ. ರಾಜು ಕೊಲೆಗೆ ಬಹುಪತ್ನಿತ್ವವೇ ಕಾರಣ ಎನ್ನಲಾಗುತ್ತಿದೆ. ಮೃತ ರಾಜೂ ಮೊದಲ ಮದುವೆಯ ವಿಚಾರ ತಿಳಿಸದೆ ಕಿರಣಳನ್ನು ವರಿಸಿದ್ದ. ಇವರಿಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ. ಇದಲ್ಲದೆ ಇತ್ತೀಚೆಗೆ ಮೂರನೆ ಮದುವೆಯಾಗಿದ್ದು, ಆಕೆ ಈಗ ಗರ್ಭಿಣಿಯಾಗಿರುವ ವಿಚಾರ ಕಿರಣಳಿಗೆ ತಿಳಿದಿದೆ. ಪತಿಯ ಬಹುಪತ್ನಿತ್ವದ ವಿಚಾರ ತಿಳಿದು ಆಘಾತಕ್ಕೊಳಗಾದ ಕಿರಣ ಆತನನ್ನು ಮುಗಿಸಲು ಪ್ಲಾನ್ ಮಾಡಿದ್ದಾಳೆ. ಈ ವೇಳೆ ಉದ್ಯಮದ ವಿಚಾರದಲ್ಲಿ ರಾಜು ತನ್ನ ಪಾರ್ಟನರ್‍ಗಳ ಜೊತೆಗೆ ವೈರತ್ವ ಹೊಂದಿದ್ದರು. ಇದರಿಂದ ಇವರನ್ನು ಸಂಪರ್ಕಿಸಿ ರಾಜು ಕೊಲೆಗೆ 10 ಲಕ್ಷ ರೂಪಾಯಿಗೆ 2ನೇ ಪತ್ನಿ ಕಿರಣ ಸುಫಾರಿ ನೀಡಿದ್ದಳು ಎನ್ನಲಾಗುತ್ತಿದೆ.
Laxmi News 24×7