ವಿಜಯವಾಡ(ಆಂಧ್ರಪ್ರದೇಶ) : ನಿಮ್ಮ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವ ಸಿನಿಮಾದ ಮೊದಲ ದಿನದ ಪ್ರತಿ ಶೋನ ತಲಾ 100 ಟಿಕೆಟ್ಗಳನ್ನು ಮೇಯರ್ ಕಚೇರಿಗೆ ಕಳುಹಿಸಿಕೊಡಿ.
ಹೀಗೆಂದು ವಿಜಯವಾಡ ಮೇಯರ್ ಚಿತ್ರಮಂದಿರಗಳಿಗೆ ಕಟ್ಟಾಜ್ಞೆ ಹೊರಡಿಸಿದ್ದಾರೆ.
ಪಾಲಿಕೆ ಸದಸ್ಯರು ಮತ್ತು ಮುಖಂಡರು ಸಿನಿಮಾ ಟಿಕೆಟ್ಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಕಾರಣಕ್ಕೆ ಮೇಯರ್ ರಾಯನ ಭಾಗ್ಯಲಕ್ಷ್ಮಿ ವಿಜಯವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಚಿತ್ರಮಂದಿರಗಳಿಗೆ ಇಂತಹದೊಂದು ಪತ್ರ ಬರೆದು ಸೂಚಿಸಿದ್ದಾರೆ.
ಮಲ್ಟಿಪ್ಲೆಕ್ಸ್ನಲ್ಲಿ ತೆರೆ ಕಾಣುವ ಪ್ರತಿ ಸಿನಿಮಾದ ಮೊದಲ ಶೋನ 100 ಟಿಕೆಟ್ಗಳನ್ನು ಮೇಯರ್ ಕಚೇರಿಗೆ ಕಳುಹಿಸಿಕೊಡಬೇಕು. ಅದಕ್ಕೆ ತಗಲುವ ವೆಚ್ಚವನ್ನು ಪಾವತಿಸಲಾಗುತ್ತದೆ ಎಂದೂ ಚಿತ್ರಮಂದಿರಗಳಿಗೆ ಅವರು ಪತ್ರ ಬರೆದಿದ್ದಾರೆ.