ಸಿಲಿಗುರಿ, (ಪಶ್ಚಿಮ ಬಂಗಾಳ) : ಚಿರತೆಯನ್ನು ಬೇಟೆಯಾಡಿ ಅದನ್ನು ಕೊಂದು ಬಳಿಕ ಅದರ ಮಾಂಸವನ್ನು ಕಿರಾತಕರು ತಿಂದಿದ್ದಾರೆ.
ಬಳಿಕ ಚಿರತೆ ಮಾಂಸದೊಂದಿಗೆ ಪಿಕ್ನಿಕ್ ಮಾಡಿದ್ದಾರೆ. ಆಮೇಲೆ ಚಿರತೆ ಉಗುರುಗಳು ಮತ್ತು ಚರ್ಮ ಮಾರಾಟ ಮಾಡಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಸಿಲಿಗುರಿಯಲ್ಲಿ ನಡೆದಿದೆ.
ಚಿರತೆಯನ್ನ ಬೇಟೆಯಾಡಿ ಮಾಂಸ ತಿಂದು ಪಿಕ್ನಿಕ್..
ಏನಿದು ಘಟನೆ : ಇತ್ತೀಚೆಗೆ ಚಿರತೆಯೊಂದು ಸತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಷಯ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ, ಸಶಸ್ತ್ರ ಗಡಿ ಪಡೆಗಳ ಗುಪ್ತಚರ ಇಲಾಖೆ ಮತ್ತು ಬಂದರು ಕಚೇರಿಯ ಗಮನಕ್ಕೆ ಬಂದಿತು. ಚಿತ್ರಗಳು ಕೈಗೆ ಬಂದ ತಕ್ಷಣ ಅವರು ತನಿಖೆಗೆ ಧಾವಿಸಿದರು. 15 ದಿನಗಳ ಸತತ ತನಿಖೆಯ ಬಳಿಕ ಕೊನೆಗೂ ಆರೋಪಿಗಳು ಪತ್ತೆಯಾಗಿದ್ದಾರೆ.
Laxmi News 24×7