ರಾಯಬಾಗ ತಾಲೂಕೀನ ಅತಿದೊಡ್ಡ ಹಾಗೂ 5 ದಿನ ನಡೆಯುವ ಯಲ್ಪಾರಟ್ಟಿ ಅರಣ್ಯ ಸಿದ್ದೇಶ್ವರ ಜಾತ್ರೆ ಗುರುವಾರ ಸಂಪನ್ನಗೊಂಡಿತು.
ರಾಯಬಾಗ ತಾಲೂಕಿನ ಅತಿದೊಡ್ಡ ಹಾಗೂ 5 ದಿನ ನಡೆಯುವ ಈ ಜಾತ್ರೆ ಇದೆ ರವಿವಾರ ಕರಿಕಟ್ಟುವ ಮೂಲಕ ಭಕ್ತರು ದಿಡನಮಸ್ಕಾರ ಹಾಕುವುದರೊಂದಿಗೆ ಜಾತ್ರೆ ಪ್ರಾರಂಭವಾಗಿ ಬುಧುವಾರ ನೈವೇದ್ಯ ಜರುಗಿತು ಜಾತ್ರೆಯಲ್ಲಿ ಮಹತ್ವದ ಘಟ್ಟ ಗುರುವಾರ ನಿವಾಳಿಕೆ ಜರುಗಿತು. ನಿವಾಳಿಕೆ ಎಂದರೆ ರವಿವಾರದಿಂದ ಐದು ದಿನಗಳ ಕಾಲ ಅರ್ಚಕರು ನೀರು ಕುಡಿಯದೆ ಉಪವಾಸ ಕೈಗೊಂಡು ಜಾತ್ರೆಯ ಕೊನೆಯ ದಿನವಾದ ಗುರುವಾರ ಅರ್ಚಕರಿಗೆ ಉಪವಾಸ ಸಂಪನ್ನ ಮಾಡುವ ಮೂಲಕ ನಿವಾಳಿಕೆ ಜರುಗಿತು ಜಾತ್ರೆ ಸಂಪನ್ನಗೊಂಡಿತು.
ಸಾಗರೋಪಾದಿಯಲ್ಲಿ ಭಕ್ತರು ಭಂಡಾರದಲ್ಲಿ ಮುಳುಗಿ ಅರಣ್ಯ ಸಿದ್ದೇಶ್ವರಗೆ ಚಾಂಗ್ ಬೋಲೋ ಎನ್ನುವುದು ಕೇಳಿಬಂತು.