Breaking News

ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ ‘ಆರೋಗ್ಯ ಇಲಾಖೆ’ಯ ನೌಕರರಿಗೆ ಬಿಗ್ ಶಾಕ್ : ಮಾ.31ಕ್ಕೆ ಸೇವೆ ಅಂತ್ಯ

Spread the love

ಬೆಂಗಳೂರು : ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಣ ಕಾರ್ಯಕ್ಕೆ ಗುತ್ತಿಗೆ ಆಧಾರದಲ್ಲಿ ನಿಯೋಜನೆ ಮಾಡಿಕೊಂಡಿದ್ದ ಆರೋಗ್ಯ ಸಿಬ್ಬಂದಿ ಸೇವೆಯನ್ನು ಸ್ಥಗಿತಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ.

2020 ರ ಜೂನ್ ನಲ್ಲಿ 6 ತಿಂಗಳ ಅವಧಿಗೆ ವೈದ್ಯರು, ಇತರೆ ಸಹಾಯಕ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿತ್ತು.

ಇವರ ಸೇವೆ ಮುಕ್ತಾಯ ಆಗುವ ವೇಳೆಗೆ ಮತ್ತೊಂದು ಕೋವಿಡ್ ಅಲೆ ಬಾಧಿಸುತ್ತಿದ್ದ ಹಿನ್ನೆಲೆಯಲ್ಲಿ ತಲಾ 6 ತಿಂಗಳಂತೆ ಮೂರು ಅವಧಿಗೆ ಇವರ ಸೇವೆ ಮುಂದುವರೆಸಲಾಗಿತ್ತು. ಈಗ ಕೋವಿಡ್ 3 ನೇ ಅಲೆ ತಗ್ಗಿದೆ. ಸಾರ್ವಜನಿಕರು ಶೇ. 95 ಕ್ಕೂ ಅಧಿಕ ಲಸಿಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ 4 ನೇ ಅಲೆ ಕಾಣಿಸಿಕೊಳ್ಳುವ ಖಚಿತತೆ ಇಲ್ಲ. ಆದ್ದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ಸೇವೆಯನ್ನು ಮಾರ್ಚ್ 31 ರ ನಂತರ ಕೈಬಿಡಲಾಗುತ್ತಿದೆ.

ನರ್ಸ್ ಗಳು, ಗಂಟಲು ದ್ರವ ಸಂಗ್ರಹಣೆ ಸಿಬ್ಬಂದಿ, ದತ್ತಾಂಶ ಸಂಗ್ರಹಣಕಾರರು ಮತ್ತು ಸಹಾಯಕ ಆರೋಗ್ಯ ಸಿಬ್ಬಂದಿ ಸೇರಿ 2,300 ಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರು. ಸದ್ಯ ಇವರ ಸೇವೆ ಮಾರ್ಚ್ 31 ಕ್ಕೆ ಅಂತ್ಯವಾಗಲಿದೆ.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ