Breaking News

ಅಪ್ರಾಪ್ತೆಯ ಪ್ರಜ್ಞೆ ತಪ್ಪಿಸಿ ನಿರಂತರ ಅತ್ಯಾಚಾರ: ಆರೋಪಿಗಳ ಬಂಧನ

Spread the love

 

ಬೆಂಗಳೂರು: ಅಪ್ರಾಪ್ತೆಯ ಪ್ರಜ್ಞೆ ತಪ್ಪಿಸಿ ನಾಲ್ಕು ದಿನ ನಿರಂತರವಾಗಿ ಅತ್ಯಾಚಾರವೆಸಗಿದ್ದ ನಾಲ್ವರು ಹಾಗೂ ಸಹಕರಿಸಿದ ಇಬ್ಬರು ಮಹಿಳೆಯರನ್ನು ಎಚ್‌ಎಸ್‌ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

 

ಬಂಧಿತರನ್ನು ಕೇಶವಮೂರ್ತಿ, ರಫೀಕ್, ಶರತ್, ಸತ್ಯರಾಜು ರಾಜೇಶ್ವರಿ ಹಾಗೂ ಕಲಾವತಿ ಎಂದು ಗುರುತಿಸಲಾಗಿದೆ.

ಸಂತ್ರಸ್ತೆಯು ಆರೋಪಿ ರಾಜೇಶ್ವರಿ ಬಳಿ ಟೈಲರಿಂಗ್ ಕಲಿಯಲು ಹೋಗುತ್ತಿದ್ದಳು. ಜ್ಯೂಸ್​ನಲ್ಲಿ ಪ್ರಜ್ಞೆ ತಪ್ಪಿಸುವ ಔಷಧಿ ಬೆರೆಸಿ ಕೊಟ್ಟಿದ್ದ ರಾಜೇಶ್ವರಿ ಆರೋಪಿ ಕೇಶವಮೂರ್ತಿ ಅತ್ಯಾಚಾರವೆಸಗಲು ಸಾಥ್ ನೀಡಿದ್ದಳು. ಪ್ರಜ್ಞೆ ಬಂದ ನಂತರ ಸ್ನಾನ ಮಾಡಿಸಿ ಅಪ್ರಾಪ್ತೆಯನ್ನು ಮನೆಗೆ ಕಳಿಸಿದ್ದ ರಾಜೇಶ್ವರಿ ಯಾರಿಗೂ ವಿಷಯ ತಿಳಿಸದಂತೆ ಬೆದರಿಸಿದ್ದಳು. ನಂತರ ಇದೇ ರೀತಿ ನಾಲ್ಕು ದಿನಗಳ ಕಾಲ ಉಳಿದ ಆರೋಪಿಗಳನ್ನು ಮನೆಗೆ ಕರೆಸಿ ಸಂತ್ರಸ್ತೆಯ ಮೇಲೆ ಅತ್ಯಾಚಾರವೆಸಗಲು ನೆರವಾಗಿದ್ದಳು. ಅತ್ಯಾಚಾರ ಮಾಡಿದವರಿಂದ ಹಣ ಪಡೆದುಕೊಳ್ಳುತ್ತಿದ್ದಳು.


Spread the love

About Laxminews 24x7

Check Also

ಬಾಬಾನಗರದ ನೆಲದಲ್ಲಿ ಹೊಸ ಕೃಷಿ ಕ್ರಾಂತಿ; ರೆಡ್ ಡೈಮಂಡ್ ಪೇರಲ ಬೆಳೆದು ಸಚಿವರಿಗೆ ಉಡುಗೊರೆ ನೀಡಿದ ರೈತ*

Spread the love : ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಬರುವ ತಿಕೋಟಾ ತಾಲ್ಲೂಕಿನ ಬಾಬಾನಗರದ ನೆಲದಲ್ಲಿ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ