ದಕ್ಷಿಣದ ಖ್ಯಾತ ನಿರ್ದೇಶಕ ರಾಜಮೌಳಿ ಅವರ ಎರಡು ಸಿನಿಮಾದಲ್ಲಿ ಈಗಾಗಲೇ ನಟಿಸಿರುವ ಕಿಚ್ಚ ಸುದೀಪ್, ಇದೀಗ ಅವರ ಮತ್ತೊಂದು ಸಿನಿಮಾದಲ್ಲಿ ಒಂದಾಗಿದ್ದಾರೆ. ಅದು ಆರ್.ಆರ್.ಆರ್ ಸಿನಿಮಾದಲ್ಲಿಯೇ ಎನ್ನುವುದು ಬಿಗ್ ಸರ್ ಪ್ರೈಸ್.
ಈಗ’ ಮತ್ತು ‘ಬಾಹುಬಲಿ’ ಸಿನಿಮಾದಲ್ಲಿ ಕಿಚ್ಚನಿಗೆ ಒಂದೊಳ್ಳೆ ಪಾತ್ರ ಕೊಟ್ಟು ತಮ್ಮ ಟೀಮ್ ಗೆ ಸೇರಿಸಿಕೊಂಡಿದ್ದರು ರಾಜಮೌಳಿ. ಮತ್ತೆ ಮತ್ತೆ ಸುದೀಪ್ ಅವರ ಜತೆ ಸಿನಿಮಾ ಮಾಡುವ ಇಂಗಿತವನ್ನೂ ಅವರು ವ್ಯಕ್ತ ಪಡಿಸಿದ್ದರು. ಆದರೆ, ಆರ್.ಆರ್.ಆರ್ ಸಿನಿಮಾದಲ್ಲಿ ಸುದೀಪ್ ಅವರಿಗೆ ಸೂಟ್ ಆಗುವಂತಹ ಪಾತ್ರ ಇರಲಿಲ್ಲವಂತೆ. ಹಾಗಾಗಿ ಈ ಸಿನಿಮಾದಲ್ಲಿ ಕಿಚ್ಚನಿಗೆ ನಟಿಸುವುದಕ್ಕೆ ಆಗಲಿಲ್ಲ. ಆದರೇನಂತೆ, ಈ ಸಿನಿಮಾದಲ್ಲಿಯೂ ಕಿಚ್ಚ ಇರಲಿದ್ದಾರೆ. ಅದು ಟ್ರೇಲರ್ ರೂಪದಲ್ಲಿ ಎನ್ನುವುದು ವಿಶೇಷ.
ಇನ್ನೇರಡು ವಾರ ಕಳೆದರೆ, ಆರ್.ಆರ್.ಆರ್ ಸಿನಿಮಾ ತೆರೆಯ ಮೇಲಿರುತ್ತದೆ. ಇತ್ತ ಸುದೀಪ್ ನಟನೆಯ ವಿಕ್ರಾಂತ್ ರೋಣ ಕೂಡ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸಿನಿಮಾದ ಟ್ರೇಲರ್ ಅನ್ನು ಆರ್.ಆರ್.ಆರ್ ಸಿನಿಮಾ ತೆರೆಕಂಡ ಚಿತ್ರಮಂದಿರಗಳಲ್ಲಿ ಒಟ್ಟಿಗೆ ನೋಡಬಹುದಂತೆ. ಆಗೊಂದು ಪ್ಲ್ಯಾನ್ ಮಾಡಿದೆ ಚಿತ್ರತಂಡ.