ಬೆಂಗಳೂರು, ಮಾ. 08: “ನನಗಾಗಿ ಕನ್ನಡಿಗರು ಮಿಡಿದಿದ್ದಾರೆ. ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆಸುತ್ತೇನೆ. ಸಣ್ಣ ವಿಚಾರಗಳಿಂದ ನನ್ನ ಹೋರಾಟ ಹಳಿ ತಪ್ಪಿತ್ತು. ಪಾಸಿಬಲಿ ಪರಿಸ್ಥಿತಿಯೋ ಗೊತ್ತಿಲ್ಲ. ಅದು ಜೈಲು ಇಲ್ಲ. ಪರಿವರ್ತನೆಯ ಜಾಗ.
ನನ್ನಲ್ಲಿ ಜೈಲು ಪರಿವರ್ತನೆ ತಂದಿದೆ”
ಕೋರ್ಟ್ ಆವರಣದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ 24 ದಿನ ಜೈಲಿನಲ್ಲಿದ್ದ ವಕೀಲ ಜಗದೀಶ್ ಮಹದೇವ್ ಅವರು ಮಂಗಳವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಎರಡೂ ಪ್ರಕರಣದಲ್ಲಿ ಜಾಮೀನು ಸಿಕ್ಕ ಬಳಿಕ ಜಗದೀಶ್ ಮಂಗಳವಾರ ಸಂಜೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದರು. ಅವರ ಅಭಿಮಾನಿಗಳು ಜಗದೀಶ್‌ಗೆ ಹೂವಿನ ಹಾರ ಹಾಕಿ ಬರ ಮಾಡಿಕೊಂಡರು.
ಜೈಲಿನಿಂದ ಬಿಡುಗಡೆಯಾದ ಬಳಿಕ ಎಂದಿನಂತೆ ಫೇಸ್ ಬುಕ್ ಲೈವ್‌ನಲ್ಲಿ ಕಾಣಿಸಿಕೊಂಡ ಜಗದೀಶ್ ತನ್ನ ಜೈಲು ಜೀವನ ಹಾಗೂ ಭ್ರಷ್ಟಾಚಾರ ವಿರುದ್ಧದ ಹೋರಾಟ ಕುರಿತ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಳೇ ದಾಟಿಯಲ್ಲಿಯೇ ತನ್ನ ಸ್ನೇಹಿತೆಯ ಫೇಸ್ ಬುಕ್ ಪೇಜ್‌ನಲ್ಲಿ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.