ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ (Pushpa) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದು ಸುಳ್ಳಲ್ಲ. ಆದರೆ, ಅನೇಕ ಖದೀಮರಿಗೆ ಈ ಸಿನಿಮಾದ ಕೆಲವು ಕಳ್ಳತನ ಮಾರ್ಗಗಳು ಪ್ರಯೋಗಿಸಲು ಮುಂದಾಗಿ (Bidar) ನಡೆದಿದೆ. ಬೀದರ್ ಅತ್ತ ಮಹಾರಾಷ್ಟ್ರ (Maharashtra) ಇತ್ತ ತೆಲಂಗಾಣವನ್ನು (Telangana ) ಹಂಚಿಕೊಂಡಿರುವ ಜಿಲ್ಲೆ. ಪ್ರಮುಖ ವಾಣಿಜ್ಯ ಚಟುವಟಿಕೆಗಳಿಗಾಗಿ ಎರಡೂ ರಾಜ್ಯದ ಜನರು ಈ ಜಿಲ್ಲೆಯನ್ನೇ ಬಳಸಿಕೊಂಡು ಓಡಾಡುತ್ತಾರೆ.
ಸಾರಿಗೆ ಬಸ್ನಲ್ಲಿಯೇ ಸಾಗಾಟಕ್ಕೆ ಯತ್ನ
ಗಡಿ ಜಿಲ್ಲೆಯಲ್ಲಿ ಕೆಲವು ಅಕ್ರಮಗಳ ಜೊತೆಗೆ ಗಾಂಜಾ (Marijuana) ಮಾರಾಟದ ಸದ್ದು ಜೋರಾಗಿಯೇ ಕೇಳಿ ಬಂದಿತ್ತು. ಇಷ್ಟು ದಿನಗಳ ಕಾಲ ಕಳ್ಳ ಖದೀಮರು ಸ್ವಂತ ವಾಹನಗಳನ್ನು ಬಳಸಿಕೊಂಡು ಗಾಂಜಾ ಸಾಗಾಟ ಮಾಡುತ್ತಿದ್ದರು. ಯಾವಾಗ ಇವರಿಗೆ ಬೀದರ್ ಪೊಲೀಸರು ಸಿಂಹ ಸ್ವಪ್ನವಾದರೋ ಆಗ ಅವರು ಪರ್ಯಾಯ ಮಾರ್ಗ ಹುಡುಕಿದರು. ಸರ್ಕಾರಿ ಬಸ್ ನಲ್ಲಿ ಸಾರ್ವಜನಿಕರ ಸೋಗಿನಲ್ಲಿ ಈ ಕಳ್ಳರು ಗಾಂಜಾ ಸಾಗಣೆಗೆ ಮುಂದಾಗಿದ್ದಾರೆ. ಇದನ್ನು ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಖದೀಮರ ಆಟಾಟೋಪಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದು, ಕಳ್ಳ ಮಾರ್ಗಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಅವರ ಹೆಡೆ ಮುರಿಕಟ್ಟಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರ ದಾಳಿ
ಗಾಂಜಾ ಸಾಗಣೆದಾರರು ಬೀದರ್ ತಾಲ್ಲೂಕಿನ ಮರಕುಂದಾ ಗ್ರಾಮದ ಮಾರ್ಗವಾಗಿ ಎನ್ ಎಚ್ 65 ಹೈದರಾಬಾದ್- ಕಲಬುರಗಿ ಬಸ್‌ನಲ್ಲಿ ಗಾಂಜಾ ಸಾಗಾಟಕ್ಕೆ ಮುಂದಾಗಿದ್ದಾರೆ. ಇದನ್ನು ತಿಳಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಹೈದ್ರಾಬಾದ್- ಕಲಬುರ್ಗಿ ಮಾರ್ಗದ ಎಕ್ಸ್ ಪ್ರೆಸ್ ಬಸ್ ತಡೆ ಹಿಡಿದಿದ್ದಾರೆ. ಈ ವೇಳೆ ಬಸ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 16 ಕೇಜಿ 8 ಪ್ಯಾಕೆಟ್ ನಲ್ಲಿ ಸಾಗಾಟ ಮಾಡುತ್ತಿದ್ದ 1 ಲಕ್ಷ 60 ಸಾವಿರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.