ಚಿಕ್ಕಬಳ್ಳಾಪುರ: ಪ್ರೇಯಸಿಯನ್ನು ಪತ್ನಿಯಾಗಿಸಿಕೊಳ್ಳಲು ಆಗುವುದಿಲ್ಲ ಎಂದು ಬೇಸತ್ತ ಪ್ರೇಮಿಯೊಬ್ಬ ಆಕೆಗಾಗಿ ಜೀವ ಕಳೆದುಕೊಳ್ಳಲು ಲೈವ್ ಆಗಿ ವಿಷ ಸೇವಿಸಿದ ಪ್ರಕರಣವೊಂದು ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ತಿರ್ನಹಳ್ಳಿ ಗ್ರಾಮದಲ್ಲಿ ಇಂಥದ್ದೊಂದು ಘಟನೆ ವರದಿಯಾಗಿದೆ.
ಇಲ್ಲಿನ ಕಳವಾರ ಗ್ರಾಮದ ಕಿಶೋರ್ (25) ಪ್ರೇಯಸಿಗಾಗಿ ವಿಷ ಕುಡಿದ ಪ್ರೇಮಿ. ಈತ ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆಯೊಂದಿಗೆ ಒಡನಾಟವನ್ನೂ ಹೊಂದಿದ್ದ. ಆದರೆ ಆಕೆ ಈತನನ್ನು ಮದುವೆಯಾಗದಂತೆ ಅವಳ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.
ವಿರೋಧ ಮಾತ್ರವಲ್ಲದೆ ಪ್ರೇಯಸಿಯ ಮನೆಯವರಿಂದ ಕಿರುಕುಳ ಕೂಡ ನೀಡಿದ್ದಾರೆ ಎಂದು ಆರೋಪಿಸಿ, ಅದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ ಈತ ಇವೆಲ್ಲವನ್ನೂ ಲೈವ್ ಮಾಡಿ ವಿಷ ಕುಡಿದಿದ್ದಾನೆ