ತಮಿಳುನಾಡು ಕಾಂಚೀಪುರಂನ ಆಯಿಲ್ ಸ್ಟ್ರೀಟ್‌ನಲ್ಲಿ ವಾಸವಾಗಿದ್ದ 34 ವರ್ಷದ ರೇವತಿ ವಿಚಿತ್ರವಾದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮಾರ್ಚ್ ನಾಲ್ಕನೇ ತಾರೀಖಿನಂದು ರೇವತಿಯವರು ಹಲ್ಲುಜ್ಜುತ್ತಿರುವಾಗ, ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಆಕೆ ಬಿದ್ದ ರಭಸಕ್ಕೆ ಬಾಯಿಯಲ್ಲಿದ್ದ ಹಲ್ಲುಜ್ಜುವ ಬ್ರಷ್ ಟೂತ್ ಫಿಕ್ಸ್ ಸೀಳಿಕೊಂಡು, ಕೆನ್ನೆಯ ಭಾಗದಲ್ಲಿ ಅಂಟಿಕೊಂಡಿದೆ.
ಈ ಅಪಘಾತದಿಂದ ಬಾಯಿ ತೆರೆಯಲು, ಮುಚ್ಚಲು ಸಾಧ್ಯವಾಗದ ರೇವತಿಯನ್ನು ರಕ್ಷಿಸಿ ಕಾಂಚೀಪುರಂ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ನರೇನ್ ಮತ್ತು ವೆಂಕಟೇಶ್ ಅವರು ಸಮಾಲೋಚಿಸಿ ರೇವತಿಯ ಕೆನ್ನೆಯ ಮೂಲಕ ಹಲ್ಲುಜ್ಜುವ ಬ್ರಷ್ ಅನ್ನು ತೆಗೆಯಬಹುದು ಎಂದು ನಿರ್ಧರಿಸಿದರು.