ಲಂಡನ್: ರಷ್ಯಾ ಸೈನಿಕರು ಯುದ್ಧದ ನಡುವೆಯೇ ಉಕ್ರೇನಿಯನ್ನರ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಗಂಭೀರ ಆರೋಪ ಮಾಡಿದ್ದಾರೆ.
ನಗರಗಳ ಮೇಲೆ ಬಾಂಬ್‌ಗಳು ಬಿದ್ದಾಗ, ಆಕ್ರಮಿತ ನಗರಗಳಲ್ಲಿ ಸೈನಿಕರು ಮಹಿಳೆಯರನ್ನು ಅತ್ಯಾಚಾರ ಮಾಡಿದಾಗ, ದುರದೃಷ್ಟವಶಾತ್ ರಷ್ಯಾದ ಸೈನಿಕರು ಉಕ್ರೇನಿಯನ್ ನಗರಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿರುವುದಕ್ಕೆ ಸಂಬಂಧಿಸಿದ ಹಲವಾರು ಪ್ರಕರಣಗಳು ನಮ್ಮಲ್ಲಿವೆ. ಆದರೆ ಅಂತಾರಾಷ್ಟ್ರೀಯ ಕಾನೂನಿನ ದಕ್ಷತೆಯ ಬಗ್ಗೆ ಮಾತನಾಡುವುದು ಕಷ್ಟ ಎಂದು ಲಂಡನ್‌ನಲ್ಲಿ ಕುಲೆಬಾ ಹೇಳಿದ್ದಾರೆ.
ಈ ಯುದ್ಧವನ್ನು ಸಾಧ್ಯವಾಗಿಸಿದ ಎಲ್ಲರನ್ನೂ ನ್ಯಾಯಾಂಗದ ವ್ಯಾಪ್ತಿಗೆ ತರಲು ನನಗೆ ಲಭ್ಯವಿರುವ ಏಕೈಕ ಸಾಧನ ನಾಗರಿಕರು ಎಂದು ಕುಲೆಬಾ ಮಾತನಾಡಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾ ಕಳೆದ ವಾರದಿಂದ ನಿರಂತರವಾಗಿ ಯುದ್ಧವನ್ನು ನಡೆಸುತ್ತಿದೆ. ಈಗಾಗಲೇ ಹಲವು ನಗರಗಳನ್ನು ರಷ್ಯಾ ಸೇನಾ ಪಡೆ ತನ್ನ ವಶಕ್ಕೆ ತೆಗೆದುಕೊಂಡಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು, ಸೈನಿಕರು ಮರಣವನ್ನಪ್ಪಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವೆ ಈವರೆಗೆ ನಡೆದಿರುವ ಮಾತುಕತೆಗಳು ಸಫಲವಾಗಿಲ್ಲ