ರಾಯಚೂರು: ಚಂದನವನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಮಂತ್ರಾಲಯಕ್ಕೆ ಭೇಟಿ ಕೊಟ್ಟಿದ್ದಾರೆ.
ರಾಯರ ಪಟ್ಟಾಭಿಷೇಕ ಹಾಗೂ ಜನ್ಮದಿನಾಚರಣೆಯನ್ನ ಗುರುವೈಭವೋತ್ಸವವಾಗಿ ಆಚರಣೆ ಮಾಡಲಾಗುತ್ತೆ. ಈ ಹಿನ್ನೆಲೆ ಇಂದು ರಾಯರ 401ನೇ ಪಟ್ಟಾಭಿಷೇಕವಾಗಿದ್ದು, ಸುದೀಪ್ ಮಂತ್ರಾಲಯಕ್ಕೆ ಆಗಮಿಸಿದರು. ಸುದೀಪ್ ಮಂತ್ರಾಲಯಕ್ಕೆ ಆಗಮಿಸಿದ ನಂತರ ರಾಯರ ಬೃಂದಾವನದ ದರ್ಶನವನ್ನು ಮೊದಲು ಪಡೆದಿದ್ದಾರೆ. ಬಳಿಕ ಕಿಚ್ಚನಿಗೆ ವೇದಿಕೆ ಕಾರ್ಯಕ್ರಮದಲ್ಲಿ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಸನ್ಮಾನ ಮಾಡಿದ್ದಾರೆ.
Laxmi News 24×7