ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಹರಿಹಾಯ್ದಿದೆ, ಮೇಕೆದಾಟು ಪಾದಯಾತ್ರೆ ಬಗ್ಗೆ ಲೇವಡಿ ಮಾಡಿರುವ ಬಿಜೆಪಿ, , ಇದು ಮೇಕೆದಾಟು ಪಾದಯಾತ್ರೆ ಎಂದು ಹೇಳಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಚೆಪಿ, ಸುಳ್ಳಿನ ಜಾತ್ರೆ ಗೆ ಬಂದವರಿಗೆಲ್ಲ ಹಣದ ಆಮಿಷ, ಇದು ಬಂಡೆ ಮತ್ತು ಮಂಡೆ ಒಡೆದ ಹಣವಲ್ಲದೆ ಮತ್ತೇನು?
ವಿಶೇಷವಾಗಿ, ಮೇಕೆದಾಟು -ಎಣ್ಣೆ ಘಾಟು ಎಂದು ಲೇವಡಿ ಮಾಡಿದೆ.
ಮೂರು ದಿನಗಳ ಕಾಲ ಬೆಂಗಳೂರು ನಗರವಾಸಿಗಳು ಟ್ರಾಫಿಕ್ ಜಾಮ್ ಸಹಿಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಕಾಂಗ್ರೆಸ್ ಟ್ರಾಫಿಕ್ ಬಾಂಬ್ ಎಸೆದಿದ್ದಾರೆ.
1 ನಿಮಿಷ ಸಂಚಾರ ಅಸ್ತವ್ಯಸ್ತಗೊಂಡರೆ ಗಂಟೆಗಟ್ಟಲೆ ಬವಣೆಪಡಬೇಕಾದ ಈ ಸಮಯದಲ್ಲಿ 3 ದಿನ ತಡೆದುಕೊಳ್ಳುವುದು ಸುಲಭದ ಮಾತೇ? ಟ್ರಾಫಿಕ್ ಅನಾಹುತದ ಅರಿವಿದೆಯೇ? ಎಂದು ಡಿಕೆ ಶಿವಕುಮಾರ್ ಅವರಿಗೆ ಪ್ರಶ್ನಿಸಿದೆ.
ಅಡಿಗಡಿಗೊಂದು ತಂಪಾದ ಜ್ಯೂಸ್, ಐಸ್ ಕ್ರೀಮ್, ಎಳನೀರು, ಹಣ್ಣುಗಳು, ಬಾದಾಮಿ ಹಾಲು, ಮಜ್ಜಿಗೆ, ಇದು ಜಾತ್ರೆಯಲ್ಲ, ಇದು ಮೇಕೆದಾಟು ಪಾದಯಾತ್ರೆ! ಸುಳ್ಳಿನ ಜಾತ್ರೆ ಗೆ ಬಂದವರಿಗೆಲ್ಲ ಹಣದ ಆಮಿಷ, ಇದು ಬಂಡೆ ಮತ್ತು ಮಂಡೆ ಒಡೆದ ಹಣವಲ್ಲದೆ ಮತ್ತೇನು? ವಿಶೇಷವಾಗಿ, ಮೇಕೆದಾಟು -ಎಣ್ಣೆ ಘಾಟು ಎಂದು ಲೇವಡಿ ಮಾಡಿದೆ.
ಮೇಕೆದಾಟು ಯಾತ್ರೆ ಸುಳ್ಳಿನ ಜಾತ್ರೆ ಯಾಗಿ ಬದಲಾಗಿ ಈಗ ವೈಯುಕ್ತಿಕ ಪ್ರತಿಷ್ಠೆಯ ಕಣವಾಗುತ್ತಿದೆ.