Home / ರಾಜಕೀಯ / ಉಕ್ರೇನ್ ರಾಜಧಾನಿಗೆ ರಷ್ಯಾ ಸೇನೆ ಲಗ್ಗೆ: ಸ್ವದೇಶಕ್ಕೆ ಮರಳಲು ಭಾರತೀಯ ವಿದ್ಯಾರ್ಥಿಗಳ ತಹತಹ

ಉಕ್ರೇನ್ ರಾಜಧಾನಿಗೆ ರಷ್ಯಾ ಸೇನೆ ಲಗ್ಗೆ: ಸ್ವದೇಶಕ್ಕೆ ಮರಳಲು ಭಾರತೀಯ ವಿದ್ಯಾರ್ಥಿಗಳ ತಹತಹ

Spread the love

ರಷ್ಯಾದ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ನಗರ ಪ್ರವೇಶಿಸುತ್ತಿವೆ. ಉಕ್ರೇನ್​ಗೆ ಪೊಲೆಂಡ್ ಯುದ್ಧವಿಮಾನಗಳನ್ನು ಕಳಿಸಿಕೊಟ್ಟಿದ್ದರೆ ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು ತುರ್ತು ಮಿಲಿಟರಿ ನೆರವು ಒದಗಿಸಲು ಮುಂದಾಗಿವೆ

ಇಡೀ ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಉಕ್ರೇನ್​ನಲ್ಲಿ ಸಿಲುಕಿರುವ ಭಾರತ ಮತ್ತು ಇತರ ದೇಶಗಳ ವಿದ್ಯಾರ್ಥಿಗಳ ಸ್ವದೇಶಗಳಿಗೆ ಮರಳಲು ತಹತಹಿಸುತ್ತಿದ್ದಾರೆ.

Russia Attacks Ukraine: ಜಾಗತಿಕ ಸೂಪರ್​ಪವರ್ ರಷ್ಯಾ (Russia) ತನ್ನ ನೆರೆಯ ಉಕ್ರೇನ್ (Ukraine) ವಿರುದ್ಧ ದಂಡೆತ್ತಿ ಹೋಗಿರುವುದು ವಿಶ್ವದೆಲ್ಲೆಡೆ ತಲ್ಲಣ ಹುಟ್ಟಿಸಿದೆ. ವಿದ್ಯಾಭ್ಯಾಸಕ್ಕೆಂದು ಉಕ್ರೇನ್​ಗೆ ತೆರಳಿರುವ ತನ್ನ ವಿದ್ಯಾರ್ಥಿಗಳನ್ನು ತರಾತುರಿಯಲ್ಲಿ ಹಿಂದಕ್ಕೆ ಕರೆಸಿಕೊಳ್ಳಲು ಭಾರತವೂ ಸೇರಿದಂತೆ ವಿವಿಧ ದೇಶಗಳ ವಿದೇಶಾಂಗ ವ್ಯವಹಾರಗಳ ಇಲಾಖೆಯು ಕೊನೇ ಕ್ಷಣದ ಪ್ರಯತ್ನಗಳನ್ನು ಮುಂದುವರಿಸಿವೆ.

ಉಕ್ರೇನ್​ನಲ್ಲಿ ರಷ್ಯನ್ ಪಡೆಗಳ ದಾಳಿಗೆ ಹಾವೇರಿಯ ನವೀನ್ ಗ್ಯಾನಗೌಡರ್ ಮೃತಪಟ್ಟಿದ್ದಾರೆ. ಸಂಘರ್ಷ ಆರಂಭವಾದ ನಂತರ ಉಕ್ರೇನ್​ನಲ್ಲಿ ಮೃತಪಟ್ಟ ಮೊದಲ ಭಾರತೀಯ ವಿದ್ಯಾರ್ಥಿ ಇವರು. ರಷ್ಯಾ ಬೆದರಿಕೆಗಳಿಗೆ ಸೊಪ್ಪು ಹಾಕದ ಉಕ್ರೇನ್ ತನ್ನಿಂದ ಸಾಧ್ಯವಿರುವ ಎಲ್ಲ ರೀತಿಯಲ್ಲಿಯೂ ಹೋರಾಟ ಮುಂದುವರಿಸಿದ್ದು, ತುರ್ತು ನೆರವಿಗಾಗಿ ವಿಶ್ವ ಸಮುದಾಯದ ಮೊರೆಯಿಟ್ಟಿದೆ. ಪೊಲೆಂಡ್ ಯುದ್ಧವಿಮಾನಗಳನ್ನು ಉಕ್ರೇನ್​ಗೆ ಕಳುಹಿಸಿಕೊಟ್ಟಿದ್ದರೆ ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು ಹಣಕಾಸು ಮತ್ತು ಮಿಲಿಟರಿ ನೆರವು ಒದಗಿಸಲು ಮುಂದೆ ಬಂದಿವೆ.

ಬೆಂಕಿಯುಂಡೆ ಆಗಿರೋ ಉಕ್ರೇನ್​ನಿಂದ ತಪ್ಪಿಸಿಕೊಂಡು ಬರುತ್ತಿರುವವರ ಜೀವನ ಅಕ್ಷರಶಃ ನರಕವಾಗಿದೆ. ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಈ ನಡುವೆ ರಷ್ಯಾ ದೇಶದ ಟಿವಿ ಚಾನೆಲ್​ಗಳನ್ನು ವಿಶ್ವದ ಹಲವು ದೇಶಗಳು ನಿಷೇಧಿಸಿವೆ, ಮಾತ್ರವಲ್ಲದೆ ರಷ್ಯಾ ವಿರುದ್ಧ ಕಠಿಣ ಅರ್ಥಿಕ ದಿಗ್ಬಂಧನಗಳನ್ನು ವಿಧಿಸಿವೆ. ಆದರೆ ರಷ್ಯಾ ಮಾತ್ರ ಇದ್ಯಾವುದಕ್ಕೂ ಜಗ್ಗುತ್ತಿಲ್ಲ.


Spread the love

About Laxminews 24x7

Check Also

ಮಾರಾಟಕ್ಕೆ ಇಟ್ಟಿದ್ದ ಮಗು ಸಾವು

Spread the love ಬೆಳಗಾವಿ: ಮಾರಾಟಕ್ಕೆ ಒಳಗಾಗುವುದನ್ನು ತಪ್ಪಿಸಿ, ರಕ್ಷಿಸಲಾಗಿದ್ದ ಹೆಣ್ಣು ಮಗು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣುಮಗು ಗುರುವಾರ (ಜೂನ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ