ರಷ್ಯಾ ಶೆಲ್ ದಾಳಿಯಲ್ಲಿ ನವೀನ್ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಮತ್ತಿಬ್ಬರು ಕನ್ನಡಿಗರಿಗೆ ಗಾಯವಾಗಿದೆ. ಹಾವೇರಿ ಜಿಲ್ಲೆಯ ಇಬ್ಬರಿಗೆ ಗಾಯವಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಉಕ್ರೇನ್‍ನ ಕಾರ್ಕಿವ್‍ನಲ್ಲಿ ರಷ್ಯಾ-ಉಕ್ರೇನ್‍ನ ಗುಂಡಿನ ಕಾಳಗದಲ್ಲಿ ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಶೇಖರಪ್ಪ ಜ್ಞಾನಗೌಡರ ಮೃತಪಟ್ಟಿರುವ ವಿಚಾರಕ್ಕೆ ಪ್ರತಿಕ್ರಯಿಸಿದ ಸಿಎಂ ಬೊಮ್ಮಾಯಿ ರಾಜ್ಯಕ್ಕೆ ನವೀನ್ ಮೃತದೇಹ ತರುವ ಕೆಲಸ ಮಾಡುತ್ತೇವೆ.
ಎರಡ್ಮೂರು ದಿನದಲ್ಲಿ ಮೃತದೇಹ ತರಲು ಪ್ರಯತ್ನಿಸುತ್ತೇವೆ. ನವೀನ್ 4ನೇ ವರ್ಷದ ಮೆಡಿಕಲ್ ಓದುತ್ತಿದ್ದರು. ಒಂದು ವಾರದಿಂದ ಬಂಕರ್‍ನಲ್ಲಿ ಇದ್ದರು ನನಗೆ ಬಹಳ ಬೇಕಾದ ಕುಟುಂಬ ಇದು ಎಂದು ಭಾವುಕರಾದ ಸಿಎಂ ಬೊಮ್ಮಾಯಿ.
Laxmi News 24×7