Breaking News

ಪ್ರಶ್ನೆ ಮಾಡುವುದನ್ನು ನಿಲ್ಲಿಸಲ್ಲ : ಮತ್ತೆ ಗುಡುಗಿದ ನಟ ಚೇತನ್

Spread the love

ನ್ಯಾಯಾಧೀಶರ ಕುರಿತು ಟ್ವೀಟ್ ಮಾಡಿದ ಪ್ರಕರಣಕ್ಕೆ ಜೈಲುವಾಸ ಅನುಭವಿಸಿ ಸೋಮವಾರ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ನಟ, ಸಾಮಾಜಿಕ ಹೋರಾಟಗಾರ ಚೇತನ್, ತಮ್ಮ  ನಿಲುವಿನ ಕುರಿತು ಮತ್ತೆ ಸ್ಪಷ್ಟಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಪ್ರಶ್ನೆ ಮಾಡುವುದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ತಪ್ಪು ಕಂಡಲ್ಲಿ ಮಾತನಾಡುತ್ತೇನೆ. ಮತ್ತಷ್ಟು ಜನರಿಗೆ ತಲುಪಲು ಆ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವೆ. ಯಾವುದೇ ಕಾರಣಕ್ಕೂ ಟ್ವಿಟ್ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.

ಸೋಮವಾರ ಸಂಜೆ ಜೈಲಿನಿಂದ ಆಚೆ ಬರುತ್ತಿದ್ದಂತೆಯೇ ನಟ ಚೇತನ್ ಅವರನ್ನು ಅಭಿಮಾನಿಗಳು ಮತ್ತು ಅವರ ತತ್ವವನ್ನು ಮೆಚ್ಚಿಕೊಂಡವರು ಜೈಲು ಮುಂದೆಯೇ ಸ್ವಾಗತಿಸಿದರು. ನೆಚ್ಚಿನ ನಟನ ಪರ ಘೋಷಣೆ ಕೂಗಿದರು. ಪತ್ನಿ ಮೇಘಾ ಕೂಡ ಪತಿಯ ಬಿಡುಗಡೆಗೆ ಹರ್ಷ ವ್ಯಕ್ತ ಪಡಿಸಿದರು.

ಚೇತನ್ ಬಿಡುಗಡೆಗಾಗಿ ವಕೀಲರಾದ ಬಾಲನ್, ಹರಿರಾಮ್ ಎ, ಕಾಶಿನಾಥ್ ಜೆ.ಡಿ, ರಮೇಶ್, ಪ್ರಸನ್ನ, ಸುನೀಲ್ ಕುಮಾರ್ ಗುನ್ನಾಪುರ ಮತ್ತು ಅವರ ತಂಡ ಸತತವಾಗಿ ಪ್ರಯತ್ನಿಸಿತ್ತು. ಹಾಗಾಗಿ ಚೇತನ್ ಬಿಡುಗಡೆ ಸಂದರ್ಭದಲ್ಲಿ ವಕೀಲರ ತಂಡವೂ ಅಲ್ಲಿತ್ತು.

 


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ