Breaking News

ಪ್ರಭಾಸ್​ ಜತೆ ‘ರಾಧೆ ಶ್ಯಾಮ್​’ ಚಿತ್ರತಂಡ ಸೇರಿದ ಶಿವಣ್ಣ;

Spread the love

ಇನ್ನೇನು ಕೆಲವೇ ದಿನಗಳಲ್ಲಿ ‘ರಾಧೆ ಶ್ಯಾಮ್​’ (Radhe Shyam Movie) ಸಿನಿಮಾ ಬಿಡುಗಡೆ ಆಗಲಿದೆ. ಬಹುಭಾಷಾ ನಟಿ ಪೂಜಾ ಹೆಗ್ಡೆ ಹಾಗೂ ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ (Prabhas) ಅಭಿನಯದ ಈ ಬಹುನಿರೀಕ್ಷಿತ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಹೈಪ್​ ಸೃಷ್ಟಿ ಆಗಿದೆ. ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸುವಂತಹ ಹೊಸ ಸುದ್ದಿ ಈಗ ಹೊರಬಿದ್ದಿದೆ. ಮೂಲ ತೆಲುಗಿನ ಈ ಚಿತ್ರತಂಡಕ್ಕೆ ಈಗ ಶಿವರಾಜ್​ಕುಮಾರ್​ (Shivarajkumar) ಕೂಡ ಜೊತೆಯಾಗಿದ್ದಾರೆ. ಇದು ಗಾಸಿಪ್​ ಅಲ್ಲವೇ ಅಲ್ಲ. ‘ರಾಧೆ ಶ್ಯಾಮ್​’ ಸಿನಿಮಾದ ನಿರ್ಮಾಪಕರು ಸ್ವತಃ ಈ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಶಿವರಾಜ್​ಕುಮಾರ್​ ಮಾತ್ರವಲ್ಲದೇ ಖ್ಯಾತ ನಿರ್ದೇಶಕ ರಾಜಮೌಳಿ, ಮಲಯಾಳಂ ಸೂಪರ್​ ಸ್ಟಾರ್​ ಪೃಥ್ವಿರಾಜ್ ಸುಕುಮಾರನ್​ ಕೂಡ ‘ರಾಧೆ ಶ್ಯಾಮ್​’ ಚಿತ್ರತಂಡ ಸೇರಿಕೊಂಡಿದ್ದಾರೆ. ಈ ಸುದ್ದಿಕೇಳಿ ಅಭಿಮಾನಿಗಳಿಗೆ ಸಖತ್​ ಥ್ರಿಲ್​ ಆಗಿದೆ. ಕೊನೇ ಹಂತದಲ್ಲಿ ಈ ದಿಗ್ಗಜರೆಲ್ಲ ‘ರಾಧೆ ಶ್ಯಾಮ್​’ ಸಿನಿಮಾ ತಂಡವನ್ನು ಸೇರಿಕೊಂಡಿದ್ದು ಯಾಕೆ? ಈ ಸಿನಿಮಾದಲ್ಲಿ ಅವರ ಕೆಲಸ ಏನು? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ಈಗಾಗಲೇ ತಿಳಿದಿರುವಂತೆ ‘ರಾಧೆ ಶ್ಯಾಮ್​’ ಸಿನಿಮಾ ತೆಲುಗಿನಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ‘ಬಾಹುಬಲಿ’ ಯಶಸ್ಸಿನ ನಂತರ ಪ್ರಭಾಸ್​ ಅವರು ದೇಶಾದ್ಯಂತ ಫೇಮಸ್​ ಆದರು. ಹಾಗಾಗಿ ಅವರ ಎಲ್ಲ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತದೆ. ‘ರಾಧೆ ಶ್ಯಾಮ್​’ ಕೂಡ ಅದೇ ಮಾರ್ಗವನ್ನು ಅನುಸರಿಸುತ್ತಿದೆ. ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಿಗೆ ಈ ಸಿನಿಮಾ ಡಬ್​ ಆಗಿ ರಿಲೀಸ್​ ಆಗುತ್ತಿದೆ. ಸಿನಿಮಾದಲ್ಲಿ ಬರುವ ಒಂದು ಹಿನ್ನೆಲೆ ನಿರೂಪಣೆಗೆ ಧ್ವನಿ ನೀಡಲು ಆಯಾ ಭಾಷೆಯ ದೊಡ್ಡ ಸೆಲೆಬ್ರಿಟಿಗಳು ಒಪ್ಪಿಕೊಂಡಿದ್ದಾರೆ.

‘ರಾಧೆ ಶ್ಯಾಮ್​’ ಚಿತ್ರದ ಕನ್ನಡ ವರ್ಷನ್​ ನಿರೂಪಣೆಗೆ ಶಿವರಾಜ್​ಕುಮಾರ್​ ಅವರು ಹಿನ್ನೆಲೆ ಧ್ವನಿ ನೀಡಿದ್ದಾರೆ. ಅದೇ ರೀತಿ, ತೆಲುಗಿನಲ್ಲಿ ರಾಜಮೌಳಿ ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್​ ಸುಕುಮಾರನ್​ ಅವರು ಈ ಕೆಲಸ ಮಾಡಿದ್ದಾರೆ. ಆ ಮೂಲಕ ಈ ಘಟಾನುಘಟಿಗಳು ‘ರಾಧೆ ಶ್ಯಾಮ್​’ ತಂಡದ ಭಾಗವಾಗಿದ್ದಾರೆ. ಇದರಿಂದ ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಆಗಿದೆ.

‘ನಿಮ್ಮ ಧ್ವನಿಯಿಂದಾಗಿ ಈ ರೊಮ್ಯಾಂಟಿಕ್​ ಕಥೆಯನ್ನು ಇನ್ನಷ್ಟು ವಿಶೇಷವಾಗಿಸಿದ್ದಕ್ಕೆ ಧನ್ಯವಾದಗಳು’ ಎಂದು ಶಿವರಾಜ್​ಕುಮಾರ್​, ರಾಜಮೌಳಿ ಹಾಗೂ ಪೃಥ್ವಿರಾಜ್​ ಸುಕುಮಾರನ್​ ಅವರಿಗೆ ‘ರಾಧೆ ಶ್ಯಾಮ್​’ ನಿರ್ಮಾಣ ಸಂಸ್ಥೆಯಾದ ‘ಯುವಿ ಕ್ರಿಯೇಷನ್ಸ್​’ ಟ್ವೀಟ್​ ಮೂಲಕ ಧನ್ಯವಾದ ತಿಳಿಸಿದೆ. ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ.


Spread the love

About Laxminews 24x7

Check Also

ನಿಧಿಯಾಸೆಗೆ ದೇವರ ಕಲ್ಲನ್ನು ಕೆಡವಿದ್ದ ಕಳ್ಳರನ್ನು ಬಂಧಿಸಿದ ಪೊಲೀಸರು: ಮೂಕಪ್ಪಸ್ವಾಮಿ ಪವಾಡ ಎಂದ ಗ್ರಾಮಸ್ಥರು

Spread the loveಹಾವೇರಿ: 4 ತಿಂಗಳ ಹಿಂದೆ ನಿಧಿ ಆಸೆಗಾಗಿ ಕೋಣಕಲ್ಲು ಭರಮಪ್ಪ ದೇವರ ಕಲ್ಲನ್ನು ಕೆಡವಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ