ಯುವರತ್ನ ಪುನೀತ್ ರಾಜ್‍ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್. ಈ ಸಿನಿಮಾ ನೋಡುವುದಕ್ಕೆ ಕನ್ನಡಿಗರಿಗೆ ಮಾತ್ರವಲ್ಲ, ದೇಶ-ವಿದೇಶಗಳಲ್ಲಿರುವ ಜನರಿಗೂ ಬಹಳ ಕುತೂಹಲವಿದೆ.‘ಜೇಮ್ಸ್’ ಅಬ್ಬರ ದೇಶ ವಿದೇಶದಲ್ಲಿ ಶುರುವಾಗಿದ್ದು, ಅಪ್ಪು ಕೊನೆಯ ಸಿನಿಮಾವನ್ನು ನೋಡಲು ಎಲ್ಲರೂ ಕಾಯುತ್ತಿದ್ದಾರೆ. ಈ ಸಿನಿಮಾವನ್ನು ಅಪ್ಪು ಹುಟ್ಟಿದ ದಿನ ಮಾರ್ಚ್ 17 ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಅಲ್ಲದೆ ಕನ್ನಡಿಗರಿಗೆ ಚಿತ್ರತಂಡ ಮತ್ತೊಂದು ಖುಷಿ ವಿಚಾರವನ್ನು ಕೊಟ್ಟಿದೆ. ಈ ಸಿನಿಮಾ ಜರ್ಮನಿ, ನೆದಲ್ರ್ಯಾಂಡ್ಸ್, ಆಸ್ಟ್ರೇಲಿಯಾ, ಪೋಲ್ಯಾಂಡ್, ಭಾರತ ಸೇರಿದಂತೆ ಒಟ್ಟು 15 ದೇಶಗಳಲ್ಲಿ ಜೇಮ್ಸ್ ರಿಲೀಸ್ ಆಗ್ತಿದೆ. ಈ ಕುರಿತು ಚಿತ್ರತಂಡ ಪೋಸ್ಟರ್ ಮೂಲಕ ಮಾಹಿತಿ ಹಂಚಿಕೊಂಡಿದೆ.
ಸಿನಿಮಾದ ಟ್ರೇಲರ್ ನೋಡಿಯೇ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಮಾ ಬಗ್ಗೆ ಕನ್ನಡ ಚಿತ್ರರಂಗ ಮಾತ್ರವಲ್ಲ, ಭಾರತೀಯ ಚಿತ್ರರಂಗವೇ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡಿದೆ. ‘ಜೇಮ್ಸ್’ ಸಿನಿಮಾ ಕುರಿತಾಗಿ ಒಂದೆರಡು ಫೋಟೋಗಳ ಹೊರತು ಹೆಚ್ಚಿನ ಮಾಹಿತಿಯನ್ನು ಸಿನಿಮಾ ತಂಡ ಹಂಚಿಕೊಂಡಿರಲಿಲ್ಲ. ಕಳೆದ ವಾರ ‘ಜೇಮ್ಸ್’ ನಲ್ಲಿ ಅಪ್ಪು ಲುಕ್‍ಗಳ ಫೋಟೋಗಳನ್ನು ರಿಲೀಸ್ ಮಾಡಿದೆ. ಆ ಫೋಟೋದಲ್ಲಿ ಅಪ್ಪು ಸೈನಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಹಾಡುಗಳ ಚಿತ್ರೀಕರಣದ ಫೋಟೋ ಮತ್ತು ಇತರ ಸನ್ನಿವೇಶದ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.