ಕೀವ್: ರಷ್ಯಾ ರಣೋತ್ಸಾಹ 4ನೇ ದಿನಕ್ಕೆ ಕಾಲಿಟ್ಟಿದ್ದು, ರಷ್ಯಾ ದಾಳಿಗೆ ಪುಟ್ಟ ದೇಶವಾಗಿರುವ ಉಕ್ರೇನ್ ತತ್ತರಿಸಿದೆ. ಇದರ ಮಧ್ಯೆ ಉಕ್ರೇನ್ ಪ್ರಜೆಗಳು ರಾಷ್ಟ್ರಗೀತೆಯನ್ನು ಹಾಡಿ ತಮ್ಮ ರಾಷ್ಟ್ರಭಕ್ತಿಯನ್ನು ತೋರಿಸುತ್ತಿರವ ವೀಡಿಯೋ ಇದೀಗ ವೈರಲ್ ಆಗುತ್ತಿದೆ.
ರಷ್ಯಾ, ಉಕ್ರೇನ್‍ನ ಮೇಲೆ ಕ್ಷೀಪಣಿ ದಾಳಿ ನಡೆಸಿದ ಪರಿಣಾಮ ಉಕ್ರೇನಿನ ಕಟ್ಟಡಕ್ಕೆ ಹಾನಿಯಾಗಿತ್ತು. ಈ ವೇಳೆ ಮಹಿಳೆಯೊಬ್ಬಳು ಉಕ್ರೇನ್‍ನ ರಾಷ್ಟ್ರಗೀತೆ ಹಾಡುತ್ತಾ ಮನೆ ಸ್ವಚ್ಛಗೊಳಿಸುತ್ತಿರುವ ಮನಮಿಡಿಯುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಮಹಿಳೆಯು ಕಣ್ಣೀರಿಡುತ್ತಾ ಉಕ್ರೇನ್ ರಾಷ್ಟ್ರಗೀತೆ ಹಾಡುತ್ತಿದ್ದಾಳೆ. ನಂತರ ಕ್ಷಿಪಣಿಯಿಂದ ಹಾನಿಗೊಳಗಾದ ಕಿಟಕಿಯ ಗಾಜಿನ ಚೂರನ್ನು ತೆಗೆಯುತ್ತಿರುವುದನ್ನು ಕಾಣಬಹುದಾಗಿದೆ. ನಿನ್ನೆ ರಾಜಧಾನಿ ಕೈವ್‍ನ ಹೊರವಲಯದಲ್ಲಿ ಉಕ್ರೇನಿಯನ್ ರಾಷ್ಟ್ರಗೀತೆಯನ್ನು ಕಹಳೆಯಲ್ಲಿ ನುಡಿಸುತ್ತಿದ್ದರು. ನೆರೆಹೊರೆಯ ಜನರು ಉಕ್ರೇನ್‍ನ ವೈಭವ ಎಂದು ಕೂಗುವುದರ ವೀಡಿಯೋವೊಂದು ವೈರಲ್ ಆಗಿತ್ತು.