ಬೆಂಗಳೂರು: ಸ್ಯಾಂಡಲ್‍ವುಡ್ ನಟ ದಿ. ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡು ಹಲವು ದಿನಗಳೆ ಕಳೆದಿದೆ. ಅವರ ಸಮಾಧಿ ವೀಕ್ಷಣೆಗೆ ಇನ್ನೂ ಸಾವಿರಾರು ಅಭಿಮಾನಿಗಳು, ಕಲಾವಿದರು ಬರುತ್ತಲೆ ಇದ್ದಾರೆ. ಇದೀಗ ಅಪ್ಪು ಸಮಾಧಿಗೆ ತಮಿಳು ನಟ ದಳಪತಿ ವಿಜಯ್ ಭೇಟಿ ನಿಡಿದ್ದಾರೆ.
ಅಪ್ಪು ಕುಟುಂಬ ಸದಸ್ಯರಿಗೆ ಹೇಳದೆ ಆಗಮಿಸಿದ ವಿಜಯ್ ಅವರು ಸಾಮಾನ್ಯ ಅಭಿಮಾನಿಯಂತೆ ಸಾಲಿನಲ್ಲಿ ಬಂದು ಅಪ್ಪು ಸ್ಮಾರಕ ದರ್ಶನ ಮಾಡಿದ್ದಾರೆ. ಯಾರಿಗೂ ಸಣ್ಣ ಸುಳಿವು ಕೊಡದಂತೆ ಬಂದು ಭೇಟಿ ನೀಡಿ ನಮನ ಅರ್ಪಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಕೆಲವು ದಿನಗಳ ಹಿಂದೆ ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ಭೇಟಿಕೊಟ್ಟಿದ್ದರು. ಈ ವೇಳೆ ಶಿವರಾಜ್‍ಕುಮಾರ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರ ನಿವಾಸಕ್ಕೆ ಭೇಟಿಕೊಟ್ಟು ಸಾಂತ್ವಾನ ಹೇಳಿದ್ದರು. ನನ್ನ ಹಾಗೂ ಪುನೀತ್ ನಡುವೆ ಮೊದಲಿನಿಂದಲೂ ಒಳ್ಳೆಯ ಬಾಂಧವ್ಯ ಇತ್ತು. ನಾನು ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಮಾಡುತ್ತಿದ್ದೆ. ಅವರು ಹೈದರಾಬಾದ್‍ಗೆ ಬಂದಾಗ ನನ್ನನ್ನು ಭೇಟಿ ಮಾಡುತ್ತಿದ್ದರು ಹೇಳುತ್ತಾ ಭಾವಕರಾಗಿದ್ದರು.