Breaking News

ನಾಳೆಯಿಂದ ಬೆಳಗಾವಿಯಲ್ಲಿ ಭಾರತ-ಜಪಾನ್‌ ಮಹತ್ವದ ಜಂಟಿ ಸೇನಾಭ್ಯಾಸ

Spread the love

ಹೊಸದಿಲ್ಲಿ: ಕರ್ನಾಟಕದ ಬೆಳಗಾವಿಯಲ್ಲಿ ಫೆ.27ರಿಂದ ಮಾ. 10ರ ವರೆಗೆ ಭಾರತ ಮತ್ತು ಜಪಾನ್‌ ವಾರ್ಷಿಕ ಜಂಟಿ ಸೇನಾಭ್ಯಾಸ ನಡೆಸಲಿವೆ.

ವಿವಿಧ ದೇಶಗಳೊಂದಿಗೆ ಭಾರತ ಸೇನಾ ತರಬೇತಿ ಅಭ್ಯಾಸವನ್ನು ನಡೆಸುತ್ತಾ ಬಂದಿದ್ದು ಅದರಂತೆ ಈ ಬಾರಿ ಜಪಾನ್‌ ಜತೆಗೂಡಿ ಸೇನಾಭ್ಯಾಸ ನಡೆಸಲಿದೆ.

ಸದ್ಯದ ಜಾಗತಿಕ ಸನ್ನಿವೇಶದಲ್ಲಿ ಉಭಯ ದೇಶಗಳು ಭದ್ರತಾ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಈ ಜಂಟಿ ಸೇನಾಭ್ಯಾಸ ಮಹತ್ವದ್ದು ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಶುಕ್ರವಾರ ಜಪಾನ್‌ ಸೇನೆ ಬೆಳಗಾವಿಗೆ ಆಗಮಿಸಿದ್ದು ರವಿವಾರ ಆರಂಭಗೊಳ್ಳಲಿರುವ “ಧರ್ಮ ಗಾರ್ಡಿಯನ್‌’ ಸೇನಾಭ್ಯಾಸದಲ್ಲಿ ಪಾಲ್ಗೊಳ್ಳಲಿದೆ. ಈ ವೇಳೆ ಎರಡೂ ದೇಶಗಳ ಯೋಧರು ಅರಣ್ಯ, ಅರೆ ನಗರ ಮತ್ತು ನಗರ ಪ್ರದೇಶದಲ್ಲಿ ಕೈಗೊಳ್ಳಲಾಗುವ ಸೇನಾ ಕಾರ್ಯಾಚರಣೆಯ ಅಭ್ಯಾಸ ನಡೆಸಲಿದ್ದಾರೆ. ಅರೆ ನಗರ ಪ್ರದೇಶಗಳಲ್ಲಿನ ಭಯೋತ್ಪಾದಕರ ಅಡಗುದಾಣ ಗಳ ಮೇಲೆ ದಾಳಿ, ಮನೆಗಳ ಶೋಧ ಕಾರ್ಯಾಚರಣೆ, ಪ್ರಥಮ ಚಿಕಿತ್ಸೆ, ಶಸ್ತ್ರರಹಿತ ಹೋರಾಟಗಳನ್ನು ಜಂಟಿಯಾಗಿ ಅಭ್ಯಸಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


Spread the love

About Laxminews 24x7

Check Also

ಬಿಡಿಸಿಸಿ ಬ್ಯಾಂಕಿನ‌ ಚುನಾವಣೆ ಬಾಲಚಂದ್ರ ಜಾರಕಿಹೊಳಿಯವರು ಅವಿರೋಧ ಆಯ್ಕೆಯ ಸಂಬಂಧ ಅಲ್ಲಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

Spread the loveಬೆಳಗಾವಿ- ಬಿಡಿಸಿಸಿ ಬ್ಯಾಂಕಿನ‌ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಅವಿರೋಧ ಆಯ್ಕೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ